- Advertisement -
![]()
- Advertisement -
ಬಂಟ್ವಾಳ: ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯ ಅಧಿಕಾರಿಗಳು ಪಾಣೆಮಂಗಳೂರು ಉಕ್ಕಿನ ಸೇತುವೆಯ ಸಾಮರ್ಥ್ಯ ಪರೀಕ್ಷೆಯನ್ನ ಮಾಡಿದ್ದು, ಇದೀಗ ವರದಿಯನ್ನು ಬಂಟ್ವಾಳ ಪುರಸಭಾ ಇಲಾಖೆಗೆ ನೀಡಿದ್ಧಾರೆ.
ಎನ್ ಐಟಿಕೆ ಸಂಸ್ಥೆಯಿಂದ ಪ್ರೊಫೆಸರ್ ಡಾ. ಪಲಿನಿ ಸ್ವಾಮಿ, ವಿಜಯನ್ ಅವರು ಆಗಮಿಸಿ ಸೇತುವೆಯ ಪರಿಶೀಲನೆ ನಡೆಸಿದ್ದು, ಇದೀಗ ಉಕ್ಕಿನ ಸೇತುವೆಯ ಕುರಿತು ವರದಿ ನೀಡಿದ್ದಾರೆ.
ಇನ್ನು ವರದಿಯಲ್ಲಿ, ʻಸೇತುವೆ ಹಾಗೂ ಜನರ ಹಿತದೃಷ್ಟಿ ವತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ, ತಾತ್ಕಾಲಿಕವಾಗಿ ಲಘು ವಾಹನಗಳ ಸಂಚಾರವನ್ನು ಮಾತ್ರ ಅನುಮತಿಸಲು ಶಿಫಾರಸು ಮಾಡಲಾಗಿದೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯ ದುರಸ್ತಿ, ಬಲಪಡಿಸುವಿಕೆ ಅಥವಾ ಬದಲಿ ಕ್ರಮಗಳನ್ನು ನಿರ್ಧರಿಸಲು ಸಮಗ್ರ ತಾಂತ್ರಿಕ ಅಧ್ಯಯನವನ್ನು ಆದಷ್ಟು ಬೇಗ ಕೈಗೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
- Advertisement -


