- Advertisement -
- Advertisement -
ಬಂಟ್ವಾಳ: ಮೇಯಲು ಬಿಟ್ಟ ಎರಡು ಕರುಗಳನ್ನು ಅಪರಿಚಿತರು ಕಾರಿನಲ್ಲಿ ತುಂಬಿಸಿಕೊಂಡು ಹೋದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಮ್ಮುಂಜೆ ಗ್ರಾಮದ ಕಲಾಯಿ ಹೌಸ್ ಎಂಬಲ್ಲಿ ನಡೆದಿದೆ. ಇನ್ನು ಕೃತ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಲ್ಲೂರು ಗ್ರಾಮದ ಘಟ್ಟಬೆಟ್ಟು ನಿವಾಸಿ ಜಗದೀಶ್ ಕುಲಾಲ್ ರವರಲ್ಲಿ 12 ದನಗಳಿದ್ದು ಜೂನ್ 28ರಂದು ಮೇಯಲು ಬಿಟ್ಟಿದ್ದು, ಇದರಲ್ಲಿ ಎರಡು ಗಂಡು ಕರುಗಳು ಕಾಣೆಯಾಗಿದೆ. ಈ ಬಗ್ಗೆ ಸ್ಥಳಿಯರಲ್ಲಿ ವಿಚಾರಿಸಿದ್ದು ಕಲಾಯಿ ಹೌಸ್ ಎಂಬಲ್ಲಿ ರಸ್ತೆ ಕಾಣುವಂತೆ ಸಿಸಿ ಕ್ಯಾಮರಾ ನೋಡಿದಾಗ ಜೂನ್ 29ರಂದು ಬೆಳಗ್ಗಿನ ಜಾವ ಸಮಯ ಸುಮಾರು 4.30 ಗಂಟೆಗೆ ಎರಡು ಗಂಡು ಕರುಗಳನ್ನು ಎರಡು ಜನ ಅಪರಿಚಿತರಪ ರಿಡ್ಜ್ ಕಾರಿನಲ್ಲಿ ತುಂಬಿಸಿ ಹೋಗುವ ದೃಶ್ಯ ಸೆರೆಯಾಗಿದೆ.
ಈ ಕುರಿತು ಮಾಲೀಕರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -