ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ರಝೀನ(24) ನಾಪತ್ತೆಯಾಗಿದ್ದಾರೆ. ಬಿ.ಸಿ.ರೋಡಿನ ಕಾರಿಂಜದ ಮಹಮ್ಮದ್ ಸಲೀಂ ಎಂಬವರ ಪತ್ನಿಯಾದ ರಝೀನರ 2 ವರ್ಷದ ಮಗ 40 ದಿನಗಳ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಕೊಯ್ಯೂರಿನ ತಾಯಿ ಮನೆಯಲ್ಲಿದ್ದ ರಝೀನ ಜೂ.22ರಂದು ಸಂಜೆ 4 ಗಂಟೆಗೆ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಹೋದವರು ಗಂಡನ ಮನೆಗೆ ಹೋಗದಿರುವುದರಿಂದ ಸಂಬಂಧಿಕರು,ಸ್ನೇಹಿತರ ಮನೆಯಲ್ಲಿ ಹುಡುಕಾಡಿದರೂ ಎಲ್ಲೂ ಪತ್ತೆಯಾಗಿಲ್ಲ. ಈ ಹಿನ್ನಲೆಯಲ್ಲಿ ರಝೀನ ಮನೆಯವರು ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.
ರಝೀನ ಕಾಣೆಯಾಗಿದ್ದಾರೆಂದು ಪೊಲೀಸ್ ಪ್ರಕಟಣೆ ಹೊರಡಿಸಿದ್ದು, ದುಂಡುಮುಖ,ಅಗಲ ಹಣೆ, ತಲೆಯಲ್ಲಿ ಕಪ್ಪು ಕೂದಲು, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಅಂದಾಜು 4.9ಅಡಿ ಎತ್ತರ, ಬುರ್ಖಾ ಧರಿಸಿದ್ದು ಕಪ್ಪು ಬಣ್ಣದ ಸ್ಕ್ಯಾಪ್ ಧರಿಸಿದ್ದಾರೆ. ಕನ್ನಡ,ತುಳು,ಬ್ಯಾರಿ ಭಾಷೆ ಬಲ್ಲವರಾಗಿದ್ದಾರೆ. ಇವರ ಚಹರೆ ಗುರುತು ಪತ್ತೆಯಾದರೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ. ಬೆಳ್ತಂಗಡಿ ಪೊಲೀಸ್ ಠಾಣೆ 08256-232093, 9480805370, 8277986367, ದ.ಕ.ಜಿಲ್ಲಾ ಕಂಟ್ರೋಲ್ ರೂಂ ಮೊ. 9480805300 ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.