ಬೆಳ್ತಂಗಡಿ : ಅಕ್ರಮವಾಗಿ ಕಳೆದ ಆರು ತಿಂಗಳಿನಿಂದ ಯಾವುದೇ ಅನುಮತಿ ಪಡೆಯದೆ ಲಾಯಿಲ ಗ್ರಾಮದ ಕಾಶಿಬೆಟ್ಟು,ಪ್ರಗತಿ ನಗರದಲ್ಲಿ ಉಜಿರೆಯ ಕಾರ್ತಿಕೇಯ.ಎಮ್.ಎಸ್ “ಅಭ್ಯಾಸ್ ಪ್ರಿ ಯೂನಿವರ್ಸಿಟಿ ಕಾಲೇಜು” ಎಂಬ ಹೆಸರಿನ ಎರಡು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ. ಈ ಕಾಲೇಜು ಕಟ್ಟಡದ ಎರಡು ಅಂತಸ್ತು ಕಟ್ಟಿದ ಬಳಿಕ ಮೇ.6 ರಂದು ಲಾಯಿಲ ಗ್ರಾಮ ಪಂಚಾಯತ್ ನಿಂದ ಹೊಸ ಕಟ್ಟಡ ನಿರ್ಮಾಣ ಮಾಡಲು ಎಂದು ಮೂರು ವರ್ಷದ ಅನುಮತಿ ಪತ್ರ ಪಡೆದುಕೊಂಡಿದ್ದಾರೆ. ಗ್ರಾಮ ಪಂಚಾಯತ್ ನೀಡಿದ ಅನುಮತಿ ಪತ್ರದಲ್ಲಿ ಕೂಡ ಭಾರಿ ಗೋಲ್ಮಾಲ್ ನಡೆದಿರುವ ಸಾಧ್ಯತೆ ಜಾಸ್ತಿ ಇದೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ: ಕಾಲೇಜ್ ಕಟ್ಟಡ ಸರಿಯಾಗಿ ನಿರ್ಮಾಣವಾಗದಿದ್ದರೂ 2025-26 ರ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಆರಂಭವಾಗಿದೆ ಎಂದು ತಾಲೂಕಿನಾದ್ಯಂತ ಬ್ಯಾನರ್ ಹಾಕಿ ಸುಮಾರು 70 ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಮೇ ತಿಂಗಳಲ್ಲಿ ಮುಂಗಡ ಹಣ ಮತ್ತು ಟಿ.ಸಿ ಪಡೆದುಕೊಂಡು ತರಗತಿ ಆರಂಭಿಸದೆ ಕಳೆದ ಜೂನ್ 1 ರಿಂದ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ.
ಪಿ.ಯು.ಬೋರ್ಡ್ ನಿಂದ ಅನುಮತಿ ಸಿಕ್ಕಿಲ್ಲ: ಕಾಲೇಜ್ಜು ಕಟ್ಟಡ ಪೂರ್ಣವಾಗಿದ್ದರೂ ದಾಖಲೆಗಳು ಸಂಪೂರ್ಣವಾಗಿ ಸರಿಯಾಗಿದ್ರೆ ಮಾತ್ರ ಪಿ.ಯು.ಬೋರ್ಡ್ ನಿಂದ ಅನುಮತಿ ಪತ್ರ ಸಿಗುತ್ತದೆ. ಕಟ್ಟಡ ನಿರ್ಮಾಣ ಪೂರ್ಣ ಮಾಡದೆ ದಾಖಲಿಸಿಕೊಂಡ ವಿದ್ಯಾರ್ಥಿಗಳ ಪೋಷಕರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದು, ಇದರಿಂದ ಹೇಗಾದರೂ ಮಾಡಿ ತರಗತಿ ಆರಂಭಿಸಲು ಪ್ರಯತ್ನ ಮಾಡುತ್ತಿದ್ದಾರೆ. ಬೆಂಗಳೂರು ಪಿ.ಯು ಬೋರ್ಡ್ ಗೆ ಸುಳ್ಳು ದಾಖಲೆ ನೀಡಿ ಈ ವರ್ಷದ ಅನುಮತಿ ಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದ್ರೆ ಮಂಗಳೂರು ಪಿ.ಯು.ಬೋರ್ಡ್ ಡಿ.ಡಿ ರಾಜೇಶ್ವರಿಯವರು ಅಭ್ಯಾಸ್ ಪ್ರಿ ಯುನಿವರ್ಸಿಟಿ ಕಾಲೇಜಿಗೆ ಸ್ಥಳ ತನಿಖೆ ಮಾಡಿ ಕಾಲೇಜು ಪೂರ್ಣವಾಗಿಲ್ಲ. ಆದ್ದರಿಂದ ಅನುಮತಿ ಪತ್ರ ನೀಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಪಿ.ಯು ಬೋರ್ಡ್ ಗೆ ವರದಿ ನೀಡಿದ್ದಾರೆ. ಇದರಿಂದ ಪಿ.ಯು.ಬೋರ್ಡ್ ನಿಂದ ಈ ವರ್ಷ ಅನುಮತಿ ಸಿಗುವುದಿಲ್ಲ ಎನ್ನಲಾಗಿದೆ.

ತರಗತಿ ಆರಂಭಕ್ಕೆ ಕಸರತ್ತು: ಈ ಕಾಲೇಜು ಕಟ್ಟಡ ಇನ್ನೂ ಪೂರ್ಣವಾಗದೆ ಪಿ.ಯು.ಬೋರ್ಡ್ ನಿಂದ ಅನುಮತಿ ಪತ್ರ ಹೇಗಾದರೂ ಮಾಡಿ ಪಡೆದುಕೊಂಡು ತರಗತಿ ಆರಂಭಿಸಲು ಆಡಳಿತ ಮಂಡಳಿ ಕಸರತ್ತು ನಡೆಸುತ್ತಿದ್ದಾರೆ. ಒಂದು ವೇಳೆ ತರಗತಿ ಸಾಧ್ಯವಾಗದೆ ಇದ್ರೆ Online ಮೂಲಕ ತರಗತಿ ಆರಂಭಿಸೋದು ಆಡಳಿತ ಮಂಡಳಿಯ ಯೋಚನೆಯಾಗಿದೆ. ಅನುಮತಿಯಿಲ್ಲದೆ ತರಗತಿ ಅಥವಾ Online ಮೂಲಕ ತರಗತಿ ಆರಂಭಿಸಲು ಅನುಮತಿ ಇಲ್ಲ ಒಂದು ವೇಳೆ ತರಗತಿ ಆರಂಭಿಸಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಿ.ಯು.ಬೋರ್ಡ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿ.ಯು.ಬೋರ್ಡ್ ಸಂಪರ್ಕಿಸಿ: ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿ ಕಾಲೇಜು ಆಡಳಿತ ಮಂಡಳಿಯ ಬಗ್ಗೆ ಪೋಷಕರಿಗೆ ಯಾವುದೇ ಅನುಮಾನಗಳಿದ್ದಾರೆ ಅಥವಾ ಹಣ ಮತ್ತು ಟಿ.ಸಿ ವಾಪಸ್ ನೀಡದೆ ತೊಂದರೆಗಳನ್ನು ನೀಡುತ್ತಿದ್ದಾರೆ. ನೇರವಾಗಿ ಮಂಗಳೂರು ಪಿ.ಯು.ಬೋರ್ಡ್ ಡಿ.ಡಿಯಾಗಿರುವ ರಾಜೇಶ್ವರಿ ಮೊ: 89043 58140 ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ ಅಥವಾ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿಗಾರರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.
ಕಾಲೇಜು ವಿರುದ್ಧ ದೂರು: ಕಾರ್ತಿಕೇಯ.ಎಮ್.ಎಸ್ ಗೆ ಸೇರಿದ “ಅಭ್ಯಾಸ್ ಪ್ರಿ ಯೂನಿವರ್ಸಿಟಿ ಕಾಲೇಜಿನ” ಅಕ್ರಮಗಳ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಈಗಾಗಲೇ ಲಾಯಿಲ ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲೂಕು ಪಂಚಾಯತ್, ಬೆಳ್ತಂಗಡಿ ತಹಶೀಲ್ದಾರ್ , ಪಿ.ಯು.ಬೋರ್ಡ್ ಮಂಗಳೂರು, ಬೆಂಗಳೂರು ಹಾಗೂ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದೆ.


