Wednesday, June 3, 2026
Homeತಾಜಾ ಸುದ್ದಿಮಾಂಗಲ್ಯ ಸರ ಖರೀದಿಸಲು ಬಂದ ಬಡ ದಂಪತಿಗೆ ಕೇವಲ 20 ರೂಪಾಯಿಗೆ ಮಾಂಗಲ್ಯ ಸರ ನೀಡಿದ...

ಮಾಂಗಲ್ಯ ಸರ ಖರೀದಿಸಲು ಬಂದ ಬಡ ದಂಪತಿಗೆ ಕೇವಲ 20 ರೂಪಾಯಿಗೆ ಮಾಂಗಲ್ಯ ಸರ ನೀಡಿದ ಚಿನ್ನದಂಗಡಿ ಮಾಲೀಕ

- Advertisement -
- Advertisement -

ಮಹಾರಾಷ್ಟ್ರ ; ಮಾಂಗಲ್ಯ ಸರ ಖರೀದಿಸಲು ಬಂದ ಬಡ ದಂಪತಿಗೆ ಕೇವಲ 20 ರೂಪಾಯಿಗೆ ಚಿನ್ನದಂಗಡಿ ಮಾಲೀಕ ಮಾಂಗಲ್ಯ ಸರ ನೀಡಿದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ. ಸದ್ಯ ಈ ಘಟನೆಯ ಹೃದಯ ಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಿವೃತ್ತಿ ಶಿಂಧೆ-ಶಾಂತಾಬಾಯಿ ದಂಪತಿ ಆಷಾಢ ಏಕಾದಶಿಯ ನಿಮಿತ್ತ ಪಂಢರಪುರಕ್ಕೆ ಪಾದಯಾತ್ರೆ ಹೊರಟಿದ್ದರು. ಮಾರ್ಗಮಧ್ಯ ದಲ್ಲಿ ಅವರಿಬ್ಬರು ಚಿನ್ನದಂಗಡಿಗೆ ಹೋಗಿದ್ದಾರೆ. ಯಾರೋ ದಾನ ಕೇಳಲು ಬಂದಿರಬಹುದು ಎಂದು ಅಂಗಡಿಯವರು ಭಾವಿಸಿದ್ದಾರೆ. ಅಂಗಡಿ ಒಳಗೆ ಬಂದ ಶಿಂಧೆ ತನ್ನ ಪತ್ನಿಗೆ ‘ಮಂಗಳಸೂತ್ರ’ ಖರೀದಿಸಲು ಬಂದಿರುವುದಾಗಿ ಅಲ್ಲಿನ ಸಿಬ್ಬಂದಿಗೆ ಹೇಳಿದ್ದಾರೆಯ

ಅಜ್ಜ 93ರ ಇಳಿ ವಯಸ್ಸಿನಲ್ಲೂ ತನ್ನ ಪತ್ನಿಯ ಮೇಲೆ ಹೊಂದಿರುವ ಪ್ರೀತಿಗೆ ಮನಸೋತ ಮಳಿಗೆಯ ಮಾಲೀಕ, ಅವರನ್ನು ಆತ್ಮೀಯವಾಗಿ ಮಾತನಾಡಿಸಿದ್ದರು. ಅವರ ಹಿನ್ನೆಲೆ ವಿಚಾರಿಸಿ, ಎಷ್ಟು ಹಣ ತಂದಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದರು. ನಂತರ, ಕೇವಲ ₹ 20 ಪಡೆದು ದಂಪತಿಗೆ ಆಭರಣವನ್ನು ನೀಡಿದ್ದರು. ಇದರಿಂದ ಭಾವುಕರಾದ ದಂಪತಿ ಕಣ್ಣೀರಾಗಿದ್ದರು. ಈ ಸಂದರ್ಭದ ವಿಡಿಯೊವನ್ನು ‘ಗೋಪಿಕಾ ಜ್ಯುವೆಲರಿ’ ಎಂಬ ಖಾತೆಯ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. 20 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೊ ವೀಕ್ಷಿಸಿಸಿದ್ದು, ವೃದ್ಧ ತನ್ನ ಪತ್ನಿ ಮೇಲೆ ಹೊಂದಿರುವ ಪ್ರೀತಿಯನ್ನು ಸಾಕಷ್ಟು ಮಂದಿ ಕೊಂಡಾಡಿದ್ದಾರೆ. ಅಂಗಡಿ ಮಾಲೀಕನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೃದ್ಧ ದಂಪತಿಯ ಕುರಿತು ಮಾತನಾಡಿರುವ ಅಂಗಡಿ ಮಾಲೀಕ, ‘₹ 1,120 ಇಟ್ಟುಕೊಂಡು, ಪತ್ನಿಯೊಂದಿಗೆ ಅಂಗಡಿಗೆ ಬಂದ ವೃದ್ಧ, ಆಕೆಗೆ ಮಂಗಳಸೂತ್ರ ಖರೀದಿಸಲು ಬಯಸುತ್ತಿರುವುದಾಗಿ ಹೇಳಿದ್ದಾರೆ. ಅದು ನನಗೆ ತುಂಬಾ ಇಷ್ಟವಾಯಿತು. ಆಶೀರ್ವಾದ ರೂಪದಲ್ಲಿ ಅವರಿಂದ ₹ 20 ತೆಗೆದುಕೊಂಡು ಮಂಗಳಸೂತ್ರವನ್ನು ನೀಡಿದೆ’ ಎಂದು ಹೇಳಿದ್ದಾರೆ.

ಶಿಂದೆ ಹಾಗೂ ಶಾಂತಾಬಾಯಿ ಅವರು, ಆಷಾಢ ಏಕಾದಶಿ ಪ್ರಯುಕ್ತ ಪಂಡರಾಪುರಕ್ಕೆ ಕಾಲ್ನಡಿಗೆ ಮೂಲಕ ತೀರ್ಥಯಾತ್ರೆ ಹೊರಟಿದ್ದಾರೆ. ಅದೇ ವೇಳೆ ಅವರು ಚಿನ್ನದಂಗಡಿಗೆ ಭೇಟಿ ನೀಡಿದ್ದರು.ಆ ದಂಪತಿಯ ಮೊದಲ ಮಗ ಸಾವನ್ನಪ್ಪಿದ್ದು, 2ನೇ ಮಗ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಕುಟಂಬ ಕಷ್ಟದಲ್ಲಿದೆ’ ಎಂದರು. ಇದರ ವಿಡಿಯೋ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!