- Advertisement -
![]()
- Advertisement -
ಚಿಕ್ಕಮಗಳೂರು : ಕುಂಭಮೇಳದಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ 6 ತಿಂಗಳ ಬಳಿಕ ಪತ್ತೆಯಾದ ಘಟನೆ ನಡೆದಿದೆ. ಕಡೂರು ತಾಲೂಕಿನ ತಂಗಲಿ ಗ್ರಾಮದ ನಿವಾಸಿ, ಚನ್ನಕೇಶವ ಸ್ವಾಮಿ ದೇವಾಲಯದ ಅರ್ಚಕರೂ ಆಗಿರುವ ನರಸಿಂಹಮೂರ್ತಿ ಜನವರಿ 28ರಂದು ಪ್ರಯಾಗ್ ರಾಜ್ ನಲ್ಲಿ ನಾಪತ್ತೆಯಾಗಿದ್ದರು.
ನರಸಿಂಹಮೂರ್ತಿ ಪುತ್ರ ಬದರೀನಾಥ್ ಜೊತೆ ಕುಟುಂಬ ಸಮೇತ ಕುಂಭ ಮೇಳ ಕ್ಕೆ ಹೋಗಿದ್ದರು. 3-4 ದಿನ ಹುಡುಕಿದ ಪುತ್ರ ಬದರೀನಾಥ್ ಕುಟುಂಬದೊಂದಿಗೆ ಊರಿಗೆ ವಾಪಸ್ಸಾಗಿದ್ದರು. ಕುಟುಂಬವನ್ನ ಊರಲ್ಲಿ ಬಿಟ್ಟು ಮತ್ತೆ ಹೋಗಿ ಹುಡುಕಿದ್ದರು ಸಿಕ್ಕಿರಲಿಲ್ಲ. ಆದರೆ 6 ತಿಂಗಳ ಬಳಿಕ ನಾಪತ್ತೆಯಾಗಿದ್ದ ನರಸಿಂಹಮೂರ್ತಿ ಮನೆಗೆ ವಾಪಾಸ್ಸಾಗಿದ್ದಾರೆ.
ಮುಂಬೈನ ಶಾರದಾ ರಿಹ್ಯಾಬಿಲಿಟೇಷನ್ ಸಂಸ್ಥೆಯಲ್ಲಿ ನರಸಿಂಹಮೂರ್ತಿ ಆಶ್ರಯ ಪಡೆದಿದ್ದರು. ಶಾರದಾ ಸಂಸ್ಥೆಯವರೇ ಕರೆತಂದು ನರಸಿಂಹಮೂರ್ತಿಯನ್ನ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ.
- Advertisement -


