- Advertisement -
- Advertisement -
ಮಂಗಳೂರು: ವಾಟ್ಸಾಪ್ ನಲ್ಲಿ ತಲ್ವಾರ್ ಹಿಡಿದು ಬೈಕ್ ಸವಾರರು ತಿರುಗಾಡುತ್ತಿದ್ದಾರೆಂಬ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಇದು ಸುಳ್ಳು ಸುದ್ದಿ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು: ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ತಲ್ವಾರ್ ಹಿಡಿದು ಬೈಕ್ ಸವಾರರು ತಿರುಗಾಡುತ್ತಿದ್ದಾರೆ ಎಂಬ ಪೋಟೋ ಮತ್ತು ವಾಯ್ಸ್ ಕ್ಲಿಪ್ ವೈರಲ್ ಆಗಿತ್ತು. ಇದೀಗ ಈ ಮಾಹಿತಿ ಸಂಪೂರ್ಣ ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ.
ಇಬ್ಬರು ಯುವಕರು ಮೂಡಬಿದ್ರೆಗೆ ಹೋಗುತ್ತಿದ್ದಾಗ ಹಿಂಬದಿಯ ಸವಾರ ತನ್ನ ಕೈಯಲ್ಲಿ ಆಕ್ವೇರಿಯಂ ಕಲ್ಲು ಮತ್ತು ಇ-ಸಿಗರೇಟ್ ಹಿಡಿದುಕೊಂಡಿದ್ದರ.ಅದನ್ನೇ ತಲ್ವಾರ್ ಅಂತಾ ಪೋಟೋ ತೆಗೆದು ವೈರಲ್ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಜ್ಪೆ ಠಾಣೆಯಲ್ಲಿ ತಪ್ಪು ಮಾಹಿತಿ ಹರಡಿದವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸದ್ದಾರೆ.
- Advertisement -