- Advertisement -
![]()
- Advertisement -
ಬೆಂಗಳೂರು: ಆರ್ ಸಿ ಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾಗಿ 11 ಜನ ಸಾವನ್ನಪ್ಪಿದ ದುರಂತದ ಹೊಣೆ ಹೊರಲು ಸರ್ಕಾರ ಸಿದ್ಧ ಎಂದ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಕಾಲ್ತುಳಿತ ದುರಂತದ ಹೊಣೆ ಹೊರಲು ಸರ್ಕಾರ ಸಿದ್ಧವಾಗಿದೆ. ಇಲ್ಲಿ ರಾಜಕೀಯ ಬೇಡ ಎಂದಿದ್ದು, ಈ ಸಮಯದಲ್ಲಿ ರಾಜಕೀಯಕ್ಕಿಂತಲೂ ಆ ಕುಟುಂಬದವರ ಜೊತೆಗೆ ನಾವು ನಿಲ್ಲುವುದು ಮುಖ್ಯ ಎಂದಿದ್ದಾರೆ.
ಹೀಗಾಗುತ್ತದೆ ಎಂದು ಯೋಚಿಸಿರಲಿಲ್ಲ, ಜನ ಹೆಚ್ಚಾಗುತ್ತಿದ್ದಂತೆ ಮೆಟ್ರೋ ಸಂಚಾರ ಕೂಡ ನಿಲ್ಲಿಸಿದ್ದೆವು ಆದರೂ ಈ ರೀತಿ ಆಗಿರುವುದು ಎಲ್ಲರಿಗೂ ದುಃಖ ತಂದಿದ್ದು, ರಾಜ್ಯ ಸರ್ಕಾರ ಈ ದುರಂತದ ಹೊಣೆ ಹೊರುತ್ತದೆ ಎಂದು ತಿಳಿಸಿದ್ದಾರೆ.
- Advertisement -


