Tuesday, June 9, 2026
Homeಕರಾವಳಿಉಡುಪಿಉಡುಪಿ: ಮದುವೆಯಾದ 12 ವರ್ಷಗಳ ಬಳಿಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ; ಪೊಲೀಸ್ ಠಾಣೆ...

ಉಡುಪಿ: ಮದುವೆಯಾದ 12 ವರ್ಷಗಳ ಬಳಿಕ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ಪತಿ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

- Advertisement -
- Advertisement -

ಉಡುಪಿ: ಮದುವೆಯಾದ 12 ವರ್ಷಗಳ ಬಳಿಕ ಪತ್ನಿಗೆ ಪತಿಯೊಬ್ಬ ತ್ರಿವಳಿ ತಲಾಖ್ ನೀಡಿದ್ದರಿಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.

ಬ್ರಹ್ಮಾವರದ ಹಾರಾಡಿ ಗ್ರಾಮದ ರಿಫಾ ಎಂಬ ಮಹಿಳೆ, ದಿನಾಂಕ 24/05/2013 ರಂದು ಮೊಹಮ್ಮದ್ ಹಾರೀಸ್ ರವರನ್ನು ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿ ಅವರಿಗೆ 10 ವರ್ಷದ ಮಗನಿದ್ದಾನೆ. ಪ್ರಸ್ತುತ ಪತಿ ಓಮನ್ ದೇಶದಲ್ಲಿ ನೌಕರಿಯಲ್ಲಿದ್ದು, ಗಂಡನ ಮನೆಯವರು ಸೇರಿ ಪಿತೂರಿ ಮತ್ತು ಚಾಡಿ ಮಾತುಗಳಿಂದ ಪತಿಯು ಜಗಳ ಮಾಡುತ್ತಿದ್ದರು ಎಂದು ರಿಫಾ ಆರೋಪಿಸಿದ್ದಾರೆ.

ದಿನಾಂಕ 09/12/2024 ರಂದು ಪತಿಯು ಪತ್ನಿಯ ಮನೆಗೆ, ಅವರು ಕೆಲಸ ಮಾಡುವ ಶಾಲೆಗೆ ಹಾಗೂ ಅವರ ಹೊನ್ನಾಳದ ಜಮಾತ್ ಗೆ ಕಾನೂನು ಬಾಹಿರವಾಗಿ ಹಾಗೂ ಪತ್ನಿಯ ಇಚ್ಚೆಗೆ ವಿರುದ್ಧವಾಗಿ ತ್ರಿವಳಿ ತಲಾಖ್ ನೀಡಿರುವ ಬಗ್ಗೆ ನೊಂದಾಯಿತ ಪತ್ರ ಕಳುಹಿಸಿ, ಈಗ ಬೇರೆ ಮದುವೆ ಆಗಲು ಸಂಪೂರ್ಣ ತಯಾರಿ ಮಾಡಿಕೊಂಡಿರುವುದಾಗಿ ರಿಫಾ ಬ್ರಹ್ಮಾವರ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!