Thursday, June 4, 2026
Homeಕರಾವಳಿಉಡುಪಿಸ್ವಂತ ಮನೆಗೆ ಕುಡಿದ ಮತ್ತಿನಲ್ಲಿ ಬೆಂಕಿ ಹಚ್ಚಿದ ವ್ಯಕ್ತಿ; ತಪ್ಪಿದ ಭಾರೀ ಅನಾಹುತ

ಸ್ವಂತ ಮನೆಗೆ ಕುಡಿದ ಮತ್ತಿನಲ್ಲಿ ಬೆಂಕಿ ಹಚ್ಚಿದ ವ್ಯಕ್ತಿ; ತಪ್ಪಿದ ಭಾರೀ ಅನಾಹುತ

- Advertisement -
- Advertisement -

ಉಡುಪಿ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿದ್ದ ಸಂದರ್ಭದಲ್ಲಿ ತನ್ನ ಮನೆಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮೇ 11 ರಂದು ತನ್ನ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಸ್ವಂತ ಮನೆಗೆ ಬೆಂಕಿ ಹಚ್ಚಿದ್ದು, ನಂತರ ಉಗ್ರ ವರ್ತನೆ ತೋರಿ ಕುಟುಂಬ ಸದಸ್ಯರಿಗೆ ಭಯಪಡಿಸಿದ್ದಾನೆ. ಆತನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ಕುಟುಂಬಸ್ಥರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಲ್ಲಿ ಸಹಾಯ ಕೋರಿದ್ದು, ತಕ್ಷಣ ಸ್ಪಂದಿಸಿದ ನಿತ್ಯಾನಂದ ಒಳಕಾಡು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಬೆಂಕಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು, ಇದರಿಂದಾಗಿ ಭಾರೀ ಅಗ್ನಿ ದುರಂತವೊಂದು ತಪ್ಪಿದಂತಾಗಿದೆ.

- Advertisement -

Latest News

error: Content is protected !!