Monday, June 8, 2026
HomeUncategorizedಮಂಗಳೂರು; ಲೋಕಾಯುಕ್ತ ಅಧಿಕಾರಿ/ಸಿಬ್ಬಂದಿಯೆಂದು ಬೆದರಿಸಿದರೆ ಕೂಡಲೇ ಮಾಹಿತಿ ನೀಡಿ

ಮಂಗಳೂರು; ಲೋಕಾಯುಕ್ತ ಅಧಿಕಾರಿ/ಸಿಬ್ಬಂದಿಯೆಂದು ಬೆದರಿಸಿದರೆ ಕೂಡಲೇ ಮಾಹಿತಿ ನೀಡಿ

- Advertisement -
- Advertisement -

ಮಂಗಳೂರು; ಲೋಕಾಯುಕ್ತ ಅಧಿಕಾರಿ/ಸಿಬ್ಬಂದಿಯೆಂದು ಬೆದರಿಸಿದರೆ ಕೂಡಲೇ ಮಾಹಿತಿ ನೀಡಿ ಎಂದು  ಕರ್ನಾಟಕ ಲೋಕಾಯುಕ್ತ, ಮಂಗಳೂರು ವಿಭಾಗ  ತಿಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ತಿಳಿಸುವುದೇನೆಂದರೆ, ಯಾರೋ ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಅಧಿಕಾರಿ/ಸಿಬ್ಬಂದಿಯವರಿಗೆ ತಾನು ಲೋಕಾಯುಕ್ತ ಅಧಿಕಾರಿ/ಸಿಬ್ಬಂದಿಯೆಂದು ಹೇಳಿ ಬೆದರಿಸಿ ಕೆಲಸ ಕಾರ್ಯಗಳನ್ನು ಅಸಮುಚಿತವಾಗಿ ಮಾಡಿಕೊಳ್ಳುತ್ತಿರುವುದು, ಅಧಿಕಾರಿಗಳನ್ನು ಬೆದರಿಸುವುದಾಗಿ ಮಾಹಿತಿ ಬಂದಿರುತ್ತದೆ. ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಶ್ರೀ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರಾಗಿ, ಪೊಲೀಸ್ ಉಪಾಧೀಕ್ಷಕರಗಳಾಗಿ ಡಾ. ಗಾನ ಪಿ ಕುಮಾರ್, ಶ್ರೀ ಸುರೇಶ್ ಕುಮಾರ್ ಪಿ, ಪೊಲೀಸ್ ನಿರೀಕ್ಷಕರುಗಳಾಗಿ ಶ್ರೀಮತಿ ಭಾರತಿ ಜಿ, ಶ್ರೀ ಚಂದ್ರಶೇಖರ್ ಕೆ.ಎನ್ ಇವರು ಕರ್ತವ್ಯ ನಿರ್ವಹಿಸಿರುತ್ತಾರೆ. ಈ ಅಧಿಕಾರಿಗಳ ಬಗ್ಗೆ ಲೋಕಾಯುಕ್ತ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಬಹುದು. ಈ ಅಧಿಕಾರಿಗಳು ಅಲ್ಲದೇ ಬೇರೆ ಯಾವ ಅಧಿಕಾರಿಗಳು ಕೂಡ ಮಂಗಳೂರು ಲೋಕಾಯುಕ್ತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ. ಅನಾಮಧೇಯ ವ್ಯಕ್ತಿಗಳು ಸರ್ಕಾರಿ ಕಚೇರಿಗಳ ಅಧಿಕಾರಿ/ಸಿಬ್ಬಂದಿಯವರಿಗೆ ಬೆದರಿಸಿ ಕರೆ ಮಾಡಿದ್ದಲ್ಲಿ ಲೋಕಾಯುಕ್ತ ಅಧಿಕಾರಿಯವರಿಗೆ/ಕಛೇರಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಬಹುದಾಗಿದೆ ಎಂದು ಈ ಮಾಲಕ ಸೂಚಿಸಲಾಗಿದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು ಮೊಬೈಲ್ ನಂಬರ್ 9364062517, ಕಚೇರಿ ದೂರವಾಣಿ ಸಂಖ್ಯೆ 08242950997 ಕರೆ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Latest News

error: Content is protected !!