Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಮೀನು ವ್ಯಾಪಾರಿಯ ಕೊಲೆಗೆ ಯತ್ನ; ಜೀವ ಉಳಿಸಿದ ಹಿಂದೂ ಮಹಿಳೆ

ಮಂಗಳೂರು; ಮೀನು ವ್ಯಾಪಾರಿಯ ಕೊಲೆಗೆ ಯತ್ನ; ಜೀವ ಉಳಿಸಿದ ಹಿಂದೂ ಮಹಿಳೆ

- Advertisement -
- Advertisement -

ಮಂಗಳೂರು; ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ಅಲ್ಲಲ್ಲಿ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ. ಇದೇ ರೀತಿ ಮಂಗಳೂರಿನಲ್ಲಿ ಮುಸ್ಲಿಂ ಮೀನು ವ್ಯಾಪಾರಿ ಒಬ್ಬರನ್ನು ಅಟ್ಟಾಡಿಸಿಕೊಂಡು ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳೂರು ನಗರದ ಕುಂಟಿಕಾನದಲ್ಲಿ ನಡೆದಿದೆ. ಅಲ್ಲದೇ ಹಿಂದೂ ಮಹಿಳೆಯೊಬ್ಬರಿಂದಾಗಿ ಅವರ ಜೀವ ಉಳಿದಿದೆ.

ಮಂಗಳೂರು ನಗರದ ಕುಂಟಿಕಾನದ ಬಳಿ ಉಳ್ಳಾಲ ನಿವಾಸಿ ಮೀನು ವ್ಯಾಪಾರಿ ಲುಕ್ಮಾನ್ ಎಂಬವರು  ವ್ಯಕ್ತಿಯೊಬ್ಬರಿಗೆ ಮೀನು ನೀಡಲು ರಸ್ತೆಯಲ್ಲಿ ಕಾಯುತ್ತಿದ್ದರು. ಈ ವೇಳೆ ಇನ್ನೊವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಟ್ಟಾಡಿಸಿ, ಕಲ್ಲು ಎತ್ತಿ ಹಾಕಿ ಕೊಲೆಗೆ ಯತ್ನಿಸಿದ್ದಾರೆ. ಈ ವೇಳೆ ಹಿಂದೂ ಮಹಿಳೆಯೊಬ್ಬಳು ನೋಡಿ ಭಯದಿಂದ ಬೊಬ್ಬೆ ಹಾಕಿದ್ದು, ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

- Advertisement -

Latest News

error: Content is protected !!