Thursday, June 4, 2026
Homeತಾಜಾ ಸುದ್ದಿನಾನು ಡಿ.ಕೆ.ಸುರೇಶ್ ಪತ್ನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಪೋಸ್ಟ್ ಮಾಡಿದ ಮಹಿಳೆ; ರಾಮನಗರ ಸೆನ್...

ನಾನು ಡಿ.ಕೆ.ಸುರೇಶ್ ಪತ್ನಿ ಎಂದು ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಪೋಸ್ಟ್ ಮಾಡಿದ ಮಹಿಳೆ; ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

- Advertisement -
- Advertisement -

ರಾಮನಗರ: ಮಹಿಳೆಯೊಬ್ಬಳು ತಾನು ಮಾಜಿ ಸಂಸದ ಡಿ.ಕೆ. ಸುರೇಶ್ ಪತ್ನಿ ಎಂದು  ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾಳೆ. ಇದೀಗ  ಮಹಿಳೆಯ ವಿರುದ್ಧ ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪವಿತ್ರಾ ಎಂಬ ಮಹಿಳೆಯಿಂದ ಹೆಸರು ದುರ್ಬಳಕೆ ಮಾಡಲಾಗಿದ್ದು, ಫೇಸ್ ಬುಕ್ ನಲ್ಲಿ ಪವಿತ್ರ ಡಿ.ಕೆ.ಸುರೇಶ್ ದೊಡ್ಡಾಲಹಳ್ಳಿ ಎಂಬ ಹೆಸರಿನಲ್ಲಿ ನಕಲಿ ಅಕೌಂಟ್ ಮಾಡಿ ನಾನು ಡಿ.ಕೆ.ಸುರೇಶ್ ಪತ್ನಿ ಎಂದು ಹೇಳಿಕೊಂಡು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿ ಮಹಿಳೆ ವಿರುದ್ಧ ರಾಮನಗರ ಸೆನ್ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರದೀಪ್ ಎಂಬವರು ದೂರು ದಾಖಲಿಸಿದ್ದು ಅದರಂತೆ ಮಹಿಳೆ ವಿರುದ್ಧ 237, 319, 336, 353 ಕಲಂ ಅಡಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!