Friday, June 5, 2026
Homeಕರಾವಳಿಮಂಗಳೂರುಮಂಜೇಶ್ವರ; ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡಿಕೆ ವ್ಯಾಪಾರಿಗೆ ತಗುಲಿದ ಗುಂಡು

ಮಂಜೇಶ್ವರ; ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡಿಕೆ ವ್ಯಾಪಾರಿಗೆ ತಗುಲಿದ ಗುಂಡು

- Advertisement -
- Advertisement -

ಮಂಜೇಶ್ವರ; ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡಿಕೆ ವ್ಯಾಪಾರಿಗೆ ಗುಂಡು  ತಗುಲಿದ ಘಟನೆ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಗಡಿಭಾಗ ಮುಡಿಪು ಸಮೀಪದ ಕಜೆಪದವು ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ಬಾಕ್ರಬೈಲ್ ನಡೀಬೈಲು ನಿವಾಸಿ ಸವಾದ್ (20)  ಗಾಯಗೊಂಡವರು.

ನಿನ್ನೆ ಸಂಜೆ ವೇಳೆ ಬೈಕ್ ನಲ್ಲಿ ಸವಾದ್ ತೆರಳುತಿದ್ದಾಗ ಗುಂಡೇಟು ತಗುಲಿದೆ. ಕಾಲಿಗೆ ಗಂಭೀರ ಗಾಯಗೊಂಡ ಸವಾದ್ ರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಿ ಬೇಟೆಗೆ ಬಂದವರು ತಪ್ಪಿ ಗುಂಡು ಹಾರಿಸಿರುವ ಸಾಧ್ಯತೆ ಇರುವುದಾಗಿ ಮಂಜೇಶ್ವರ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದು ಮೂಲಗಳ ಪ್ರಕಾರ ಗಾಂಜಾ ವ್ಯಸನಿಗಳು ಅಥವಾ ವ್ಯಾಪಾರಿಗಳು ಕೃತ್ಯ ಎಸೆದಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಬೈಕ್ ನಲ್ಲಿ ತೆರಳುವ ಸಂದರ್ಭ ನಿರ್ಜನ ಪ್ರದೇಶದಲ್ಲಿ ವಾಹನದ ಹೆಡ್ಲೈಟ್ ಕಾಣಿಸಿದ್ದು., ಅದನ್ನು ಗಮನಿಸಿ ಸವಾದ್ ಬೈಕ್ ನಿಲ್ಲಿಸಿದ ಕಾರಣಕ್ಕೆ ಶೂಟೌಟ್ ನಡೆದಿದೆ ಅನ್ನುವ ಮಾತುಗಳು ಕೇಳಿಬಂದಿದೆ. ಮಂಜೇಶ್ವರ ಠಾಣಾ ಪೋಲೀಸರು ಕೇಸು ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಜಿಲ್ಲಾ ಪಂಚಾಯತ್ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

- Advertisement -

Latest News

error: Content is protected !!