Saturday, June 6, 2026
Homeಕರಾವಳಿಸುಳ್ಯ: ತಾಲೂಕು ಉಪಾಧ್ಯಕ್ಷ ಸ್ಥಾನ ಪುಷ್ಪಾ ಮೇದಪ್ಪಗೆ ನೀಡುವಂತೆ ಸ್ಥಳೀಯರಿಂದ ಒತ್ತಾಯ

ಸುಳ್ಯ: ತಾಲೂಕು ಉಪಾಧ್ಯಕ್ಷ ಸ್ಥಾನ ಪುಷ್ಪಾ ಮೇದಪ್ಪಗೆ ನೀಡುವಂತೆ ಸ್ಥಳೀಯರಿಂದ ಒತ್ತಾಯ

- Advertisement -
- Advertisement -

ಅರಂತೋಡು, ಜು. ಸುಳ್ಯ ತಾಲೂಕು ಪಂಚಾಯತ್ ನಲ್ಲಿ ತೆರವಾಗಿರುವ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನವನ್ನು ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆ ಪುಷ್ಪಾ ಮೇದಪ್ಪಗೆ ನೀಡಿ ಎಂದು ಸ್ಥಳೀಯ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಕಡಬ ತಾಲೂಕು ಅಸ್ತಿತ್ವಕ್ಕೆ ಬಂದ ಹಿನ್ನಲೆಯಲ್ಲಿ ಈ ಹಿಂದೆ ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದ ಸುಬೋಧ ಎಸ್.ರೈ ಅವರ ಎಣ್ಮೂರು ತಾಲೂಕು ಪಂಚಾಯತ್ ಕ್ಷೇತ್ರ ಕಡಬ ತಾಲೂಕಿಗೆ ಸೇರ್ಪಡೆಗೊಂಡಿದೆ. ಇದರಿಂದ ಅವರು ಕಡಬ ತಾಲೂಕು ಪಂಚಾಯತ್ ಸದಸ್ಯರಾಗಿದ್ದಾರೆ. ಈ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನ ಈಗ ತೆರವಾಗಿದೆ.

ಅರಂತೋಡು ತಾಲೂಕು ಪಂಚಾಯತ್ ಕ್ಷೇತ್ರ, ವಿಧಾನ ಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಉತ್ತಮ ಲೀಡ್ ಕೊಟ್ಟಿದೆ. ಇದರ ಹಿಂದೆ ಕಾರ್ಯಕರ್ತರ ಶ್ರಮ ಇದೆ. ಅಲ್ಲದೆ ಅರಂತೋಡು ಕ್ಷೇತ್ರದ ತಾಲೂಕು ಪಂಚಾಯತ್ ಕ್ಷೇತ್ರದ ಸದಸ್ಯೆ ಪುಷ್ಪಾ ಮೇದಪ್ಪ ತನ್ನ ಕ್ಷೇತ್ರದಲಿ ತನಗೆ ದೊರೆತ ಅನುದಾನವನ್ನು ಸಮಪರ್ಕವಾಗಿ ಬಳಸಿಕೊಂಡು ಅಭಿವೃದ್ದಿಗೆ ವಿನಿಯೋಗಿಸಿಕೊಂಡು ಅನೇಕ ಅಭಿವೃದ್ದಿ ಕೆಲಸ ಮಾಡಿದ್ದಾರೆ.

ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಹಾಗೆ ಧಾರ್ಮಿಕ ಕ್ಷೇತ್ರದಲ್ಲೂ ತನ್ನನ್ನು ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ತತ್ವ ಸಿದ್ದಂತಾಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ಈ ಎಲ್ಲಾ ಹಿನ್ನಲೆಯನ್ನು ಗುರುತಿಸಿ ಅವರಿಗೆ ಸುಳ್ಯ ತಾಲೂಕು ಪಂಚಾಯತ್ ಉಪಾಧ್ಯಕ್ಷ ಸ್ಥಾನ ನೀಡಲಿ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!