Saturday, October 17, 2026
Homeಕರಾವಳಿಬೆಳ್ತಂಗಡಿ : ಕ್ಷುಲಕ ವಿಚಾರಕ್ಕೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ; ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

ಬೆಳ್ತಂಗಡಿ : ಕ್ಷುಲಕ ವಿಚಾರಕ್ಕೆ ಚೂರಿಯಿಂದ ಇರಿದು ಹತ್ಯೆಗೆ ಯತ್ನ; ಆರೋಪಿಯನ್ನು ಬಂಧಿಸಿದ ವೇಣೂರು ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಅಳದಂಗಡಿ  ಸಂತೆ ಮಾರುಕಟ್ಟೆಯಲ್ಲಿ ವ್ಯಕ್ತಿಯೊಬ್ಬನ ಕುತ್ತಿಗೆ ಹಾಗೂ ಎದೆಗೆ ಚೀರಿಯಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ್ದು ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಂತೆ ಮಾರುಕಟ್ಟೆಯ ಒಳಗೆ ಏ.26 ರಂದು ರಾತ್ರಿ ವೇಳೆ ಕ್ಷುಲ್ಲಕ ಕಾರಣಕ್ಕೆ ಶಿರ್ಲಾಲು ನಿವಾಸಿ ಶೀನ(65) ಎಂಬಾತ ಹಾಗೂ ಅಳದಂಗಡಿ ಡೆನ್ನಿಸ್ ಪಿಂಟೋ(74) ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಶೀನ ಡೆನ್ನಿಸ್ ಅನ್ನು ನೆಲಕ್ಕೆ ದೂಡಿ ಹಾಕಿ ಆತನ ಮೇಲೆ ಹತ್ತಿ ಕುಳಿತು ಕುತ್ತಿಗೆಗೆ ಹಾಗೂ ಎಡಗೈ ತಟ್ಟೆಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ಡೆನ್ನಿಸ್ ಪಿಂಟೊ ಅವರ ಕುತ್ತಿಗೆಗೆ ಗಂಭೀರವಾಗಿ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಏ.27 ರಂದು ಪ್ರಕರಣ ದಾಖಲಾಗಿದ್ದು. ವೇಣೂರು ಸಬ್ ಇನ್ಸ್ಪೆಕ್ಟರ್ ಶ್ರೀಶೈಲಾ ಮುರುಗೋಡು ಮತ್ತು ತಂಡ ಏ.27 ರಂದು ಆರೋಪಿ ಶೀನ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!