- Advertisement -
- Advertisement -
ಬಂಟ್ವಾಳ:ಬಟ್ಟೆಯಂಗಡಿಯ ಶಟರ್ ನ ಬೀಗ ಮುರಿದು ಒಳಗೆ ನುಗ್ಗಿ ಕ್ಯಾಶ್ ಕೌಂಟರ್ ನಲ್ಲಿ ಇರಿಸಲಾಗಿದ್ದ ಲಕ್ಷಾಂತರ ರೂ ನಗದನ್ನು ಕಳ್ಳತನ ಮಾಡಿರುವ ಘಟನೆ ಫರಂಗಿಪೇಟೆ ಎಂಬಲ್ಲಿ ನಡೆದಿದೆ.
ಫರಂಗಿಪೇಟೆ ವಿಶ್ವಾಸ ಸಿಟಿ ಸೆಂಟರ್ ನಲ್ಲಿರುವ ಅಫೀಝ್ ಎಂಬವರ ಬಾಡಿಗೆ ಅಂಗಡಿಯಾದ ವೈಟ್ ಲೈನ್ ಕಿಡ್ಸ್ ವರ್ಲ್ಡ್ ಬಟ್ಟೆ ಅಂಗಡಿಯಲ್ಲಿ ಕಳವು ನಡೆದಿದ್ದು, ಕ್ಯಾಸ್ ಕೌಂಟರ್ ನಲ್ಲಿ ಬಟ್ಟೆ ಖರೀದಿಸಲು ಎಂಬ ಇಟ್ಟಿದ್ದ ಸುಮಾರು 4 ಲಕ್ಷ ಹಣವನ್ನು ಕಳವು ಮಾಡಿರುವ ಬಗ್ಗೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಶಟರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಂಗಡಿಯೊಳಗಿನ ಸಿಸಿ ಕ್ಯಾಮರಾ ದ ಕೇಬಲ್ ವಯರ್ ಕಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಬಟ್ಟೆ ಅಂಗಡಿಯ ಕೆಲಸದ ಯುವತಿ ಅಂಗಡಿಯನ್ನು ತೆರೆಯಲು ಬಂದಾಗ ಅಂಗಡಿಯ ಬೀಗ ಮುರಿದ ಸ್ಥಿತಿಯಲ್ಲಿತ್ತು ಎಂದು ತಿಳಿಸಿದ್ದಾರೆ.ಸ್ಥಳಕ್ಕೆ ಗ್ರಾಮಾಂತರ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಡಿದ್ದಾರೆ.
- Advertisement -