Thursday, June 4, 2026
Homeಕರಾವಳಿಮಂಗಳೂರುಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ  ವರುಣನ ರೌದ್ರಾವತಾರ; ಮರ ಬಿದ್ದು ಆಟೋ ರಿಕ್ಷಾ ಜಖಂ

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ  ವರುಣನ ರೌದ್ರಾವತಾರ; ಮರ ಬಿದ್ದು ಆಟೋ ರಿಕ್ಷಾ ಜಖಂ

- Advertisement -
- Advertisement -

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ  ವರುಣ ರೌದ್ರಾವತಾರ ತೋರಿಸಿದ್ದು ಮರ ಬಿದ್ದು ಆಟೋ ರಿಕ್ಷಾ ಜಖಂ ಆಗಿದೆ. ಲೇಡಿ ಹಿಲ್ ಬಳಿ ಅಟೋರಿಕ್ಷಾ ಒಂದರ ಮೇಲೆ ಮರವೊಂದು ಬಿದ್ದ ಘಟನೆ ನಡೆದಿದೆ.


ಮಂಗಳೂರಿನಲ್ಲಿ ಮಳೆ ಆರ್ಭಟ ಜೋರಾಗಿದೆ. ನಗರದ ವಿವಿಧೆಡೆ ಶುಕ್ರವಾರ ಬೆಳಗ್ಗೆಯೇ ಗುಡುಗು ಸಹಿತ ಭಾರಿ ಮಳೆಯಾಗಿದೆ. ಸುಮಾರು ಒಂದು ಗಂಟೆಯಿಂದ ಎಡೆಬಿಡದೆ ವರ್ಷಧಾರೆ ಸುರಿದಿದೆ. ದಿಢೀರ್ ಮಳೆಯಿಂದಾಗಿ ಸಾರ್ವಜನಿಕರು ಹೈರಾಣಾದರು. ದಿನನಿತ್ಯದ ಕೆಲಸಕ್ಕೆ ಹೋಗುವವರು, ವಿದ್ಯಾರ್ಥಿಗಳು ಪರದಾಡುವಂತಾಯಿತು.


ಇನ್ನು ಬೆಳಿಗ್ಗೆ ಸುರಿದ ಮಳೆಗೆ ಲೇಡಿಹಿಲ್ ಬಳಿ ಮರವೊಂದು ರಿಕ್ಷಾ ಮೇಲೆ ಬಿದ್ದ ಪರಿಣಾಮ ಆಟೋ ರಿಕ್ಷಾಕ್ಕೆ ಹಾನಿಯಾಗಿದೆ. ಈ ಘಟನೆಯಲ್ಲಿ ಪ್ರಯಾಣಿಕ ಹಾಗೂ ಡ್ರೈವರ್ ಗೆ ಯಾವುದೇ ಹಾನಿ ಯಾಗಿಲ್ಲ. ಪಾಂಡೇಶ್ವರ ಅಗ್ನಿಶಾಮಕ ದಳ ಹಾಗೂ ಸ್ಥಳಿಯ ಪೋಲಿಸರು ಮರ ತೆರವು ಕಾರ್ಯಾಚರಣೆ ನಡೆಸಿದರು.

- Advertisement -

Latest News

error: Content is protected !!