Saturday, June 6, 2026
Homeಕರಾವಳಿದಕ್ಷಿಣಕನ್ನಡದಲ್ಲಿಂದು 285 ಹೊಸ ಕೋವಿಡ್ ಕೇಸುಗಳು, 3,596ಕ್ಕೇರಿದ ಸೋಂಕಿತರ ಸಂಖ್ಯೆ,ಇಬ್ಬರು ಕೊರೊನಾಗೆ ಬಲಿ

ದಕ್ಷಿಣಕನ್ನಡದಲ್ಲಿಂದು 285 ಹೊಸ ಕೋವಿಡ್ ಕೇಸುಗಳು, 3,596ಕ್ಕೇರಿದ ಸೋಂಕಿತರ ಸಂಖ್ಯೆ,ಇಬ್ಬರು ಕೊರೊನಾಗೆ ಬಲಿ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡದಲ್ಲಿ ಕೋವಿಡ್-19 ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ಇಂದು ಒಂದೇ ದಿನ ಬರೋಬ್ಬರಿ 285 ಹೊಸ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3596 ಕ್ಕೆ ಏರಿಕೆಯಾಗಿದೆ.

ಸದ್ಯ ಜಿಲ್ಲೆಯಲ್ಲಿ 2028 ಸಕ್ರೀಯ ಕೊರೊನಾ ಪ್ರಕರಣಗಳಿದ್ದು, 1491 ಮಂದಿ ಇದುವರೆಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇವತ್ತು ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಮಂಗಳೂರಿನ 77 ವರ್ಷದ ವೃದ್ಧೆ ಹಾಗೂ ಮಂಗಳೂರಿನ 53 ವರ್ಷದ ವ್ಯಕ್ತಿಯನ್ನು ಕೋವಿಡ್ ಬಲಿ ಪಡೆದಿದೆ. ಇವರಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

- Advertisement -

Latest News

error: Content is protected !!