Thursday, June 4, 2026
Homeಕರಾವಳಿಮಂಗಳೂರುಬೆಳ್ತಂಗಡಿ: ರಾಷ್ಟ್ರ ಮಟ್ಟದಲ್ಲಿ ಉಣ್ಣಾಲು, ಕೊಯ್ಯೂರು ಮದರಸಕ್ಕೆ ಕೀರ್ತಿ ತಂದ 10 ನೇ ತರಗತಿಯ ನೂರುನ್ನಿಸಾ;...

ಬೆಳ್ತಂಗಡಿ: ರಾಷ್ಟ್ರ ಮಟ್ಟದಲ್ಲಿ ಉಣ್ಣಾಲು, ಕೊಯ್ಯೂರು ಮದರಸಕ್ಕೆ ಕೀರ್ತಿ ತಂದ 10 ನೇ ತರಗತಿಯ ನೂರುನ್ನಿಸಾ; ಉಣ್ಣಾಲು ಕೊಯ್ಯೂರು ಮದರಸ ಕ್ಕೆ ಶೇಕಡಾ 100% ಫಲಿತಾಂಶ

- Advertisement -
- Advertisement -

ಬೆಳ್ತಂಗಡಿ: ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ನಡೆಸಿದ 2025 ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ 10 ನೇ ತರಗತಿಯಲ್ಲಿ ಎಲ್ಲಾ ನಾಲ್ಕು ವಿಷಯಗಳಲ್ಲೂ ತಲಾ 100 ಅಂಕಗಳೊಂದಿಗೆ ಒಟ್ಟು 400 ರಲ್ಲಿ 400 ಪಡೆದು, ಉಣ್ಣಾಲು , ಕೊಯ್ಯೂರು ಸಿರಾಜುಲ್ ಹುದಾ ಅರೇಬಿಕ್ ಸ್ಕೂಲ್ ವಿಧ್ಯಾರ್ಥಿನಿ ನೂರುನ್ನಿಸಾ ರಾಷ್ಟ್ರ ಮಟ್ಟದಲ್ಲಿ 1st Rank ಪಡೆದು ಮದರಸ ಕ್ಕೆ ಕೀರ್ತಿ ತಂದಿರುತ್ತಾಳೆ. ಈ ವಿಧ್ಯಾರ್ಥಿನಿಯು ಇಬ್ರಾಹೀಂ ಹಾಗೂ ಶಾಹಿದಾ ದಂಪತಿ ಪುತ್ರಿಯಾಗಿರುತ್ತಾಳೆ. ಈ ವರ್ಷದ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿ 400 ರಲ್ಲಿ  396 ಅಂಕದೊಂದಿಗೆ 2nd Rank ಗಳಿಸಿದ ಮೂವರು ವಿಧ್ಯಾರ್ಥಿನಿಯರಾದ , ಫಾತಿಮತ್ ಝಕಿಯ್ಯಾ , ಫಾತಿಮತ್ ಸಹ್‌ಲಾ , ಫಾತಿಮತ್ ಮಾರಿಯಾ ಎಲ್ಲಾ ವಿಷಯದಲ್ಲೂ A++ ಗ್ರೇಡ್ ಪಡೆದು ಮಿಂಚಿದ್ದಾರೆ. ಮುಹಮ್ಮದ್ ರಶಾದ್ 400 ರಲ್ಲಿ 390 ಮುಹಮ್ಮದ್ ಶಫೀಕ್ 400  ರಲ್ಲಿ 365 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ, ಪಬ್ಲಿಕ್ ಪರೀಕ್ಷೆ ಬರೆದ ಹಾಗೂ ಅತ್ಯುತ್ತಮ  ಸಾಧನೆಗೈದ ಎಲ್ಲಾ ವಿಧ್ಯಾರ್ಥಿಗಳಿಗೂ, ಅಭೂತಪೂರ್ವ ಸಾಧನೆಗೆ ಕಾರಣಕರ್ತರಾದ ನಮ್ಮ ಜಮಾಅತಿನ ಖತೀಬರು ಮದರಸ ಮುಖ್ಯೋಪಾಧ್ಯಾಯರು ಆದ ಜುನೈದ್ ರಝಾ ಅಝ್ಹರಿ ಉಸ್ತಾದರಿಗೂ, ಸದಾ ಪ್ರೋತ್ಸಾಹಿಸಿದ ಪೋಷಕರಿಗೂ, ಆಡಳಿತ ಸಮಿತಿಗೂ ಸರ್ವ ಜಮಾಅತರಿಗೂ ಸಿರಾಜುಲ್ ಹುದಾ ಉಣ್ಣಾಲು, ಕೊಯ್ಯೂರಿನ  ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

- Advertisement -

Latest News

error: Content is protected !!