Friday, June 5, 2026
Homeತಾಜಾ ಸುದ್ದಿಎಲ್ಲವೂ ಇದ್ದು ಏನೂ ಇಲ್ಲ ಎನ್ನುವವರು ಈ ವಿಡಿಯೋವನ್ನೊಮ್ಮೆ ನೋಡಿ....

ಎಲ್ಲವೂ ಇದ್ದು ಏನೂ ಇಲ್ಲ ಎನ್ನುವವರು ಈ ವಿಡಿಯೋವನ್ನೊಮ್ಮೆ ನೋಡಿ….

- Advertisement -
- Advertisement -

ನಾವೆಲ್ಲ ಬದುಕಿನಲ್ಲಿ ಎದುರಾಗುವ ಚಿಕ್ಕ ಪುಟ್ಟ ಸೋಲುಗಳನ್ನೇ ಬೆಟ್ಟ ಮಾಡಿಕೊಂಡು ಲೈಫೇ ಮುಗಿದು ಹೋಯ್ತು ಅನ್ನೋ ರೀತಿ ಅದೆಷ್ಟೋ ಬಾರಿ ಅಂದುಕೊಳ್ಳುತ್ತೇವೆ. ಇನ್ನೆಷ್ಟೋ ಮಂದಿ ಜೀವನದ ಸಣ್ಣ ಪುಟ್ಟ ಸೋಲುಗಳಿಂದ ಕಂಗೆಟ್ಟು ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಾರೆ. ಆದ್ರೆ ಇದೆಲ್ಲಕ್ಕಿಂತಲೂ ಮಿಗಿಲಾದ ಬದುಕು ನಮಗಿದು ಅಂತಾ ಎಷ್ಟೋ ಮಂದಿ ಯೋಚಿಸೋದಕ್ಕೆ ಹೋಗೋದೇ ಇಲ್ಲ.

ಆದರೆ ಕೆಲವೊಂದು ಮಂದಿ ತಮ್ಮ ಜೀವನದಲ್ಲಿ ಎಲ್ಲಾ ಸೋಲುಗಳೇ ತುಂಬಿದ್ರೂ ಕೂಡ ಎಷ್ಟು ಚಂದದ ಬದುಕು ನಡೆಸ್ತಾರೆ ಅಂದ್ರೆ ನಾವೆಲ್ಲ ಅವರ ಮುಂದೆ ತಲೆ ತಗ್ಗಿಸಬೇಕು. ತಮ್ಮ ಬದುಕಿನಲ್ಲಿ ಖುಷಿ ಅನ್ನೋದು ಮರೀಚಿಕೆಯಾದ್ರೂ ಇರೋ ಖುಷಿಯನ್ನೇ ಇನ್ನೊಬ್ಬರಿಗೆ ಹಂಚುತ್ತಾ ಖುಷಿಯಿಂದ ಬಾಳ್ತಾರೆ. ಈ ವಿಡಿಯೋವನ್ನೊಮ್ಮೆ ನೋಡಿ.. ಈಕೆಗೆ ಕಾಲುಗಳೇ ಸ್ವಾಧೀನದಲ್ಲಿಲ್ಲ.ಆದರೂ ಆಕೆ ಎಲ್ಲರಂತೆ ತನಗೇನು ಆಗೇ ಇಲ್ಲ ಎಂಬಂತೆ ಬದುಕುತ್ತಿದ್ದಾರೆ. ನಾವೆಲ್ಲ ಮಾಡೋ ಕೆಲಸಗಳನ್ನು ಅತ್ಯಂತ ಸುಲಭವಾಗಿ ತಾನೂ ಮಾಡುತ್ತಾರೆ. ನಿಜಕ್ಕೂ ನಮಗೆ ಇಂಥವರು ಮಾದರಿಯಾಗ್ಬೇಕು. ಬದುಕು ಮುಗಿದೇ ಹೋಯ್ತು ಅಂತಾ ಹತಾಶರಾಗುವವರು ಈ ವಿಡಿಯೋವನ್ನೊಮ್ಮೆ. ನೋಡಿದರೆ ಜೀವನೋತ್ಸಾಹ ತನ್ನಿಂದ ತಾನೇ ಪುಟಿದೇಳುತ್ತೆ. ಇದೀಗ ಈಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಕೆಯ ಜೀವನ ಪ್ರೀತಿಗೆ ಜನ ಜೈಕಾರ ಹಾಕುತ್ತಿದ್ದಾರೆ.

ಮನಕಲಕುವ ವೀಡಿಯೋ ನೋಡಿ

Posted by Shilpa Shetty on Tuesday, 7 July 2020

- Advertisement -

Latest News

error: Content is protected !!