Sunday, June 7, 2026
Homeಅಪರಾಧಕ್ಯಾಷಿಯರ್‌ ಕಿರುಕುಳದಿಂದ ಬೆಸತ್ತ ಮಹಿಳೆ; ಲಾಂಗ್ ಹಿಡಿ‌ದು ಬಸ್ ಸ್ಟ್ಯಾಂಡ್ ನಲ್ಲಿ ಮಹಿಳೆಯ ಓಡಾಟ   

ಕ್ಯಾಷಿಯರ್‌ ಕಿರುಕುಳದಿಂದ ಬೆಸತ್ತ ಮಹಿಳೆ; ಲಾಂಗ್ ಹಿಡಿ‌ದು ಬಸ್ ಸ್ಟ್ಯಾಂಡ್ ನಲ್ಲಿ ಮಹಿಳೆಯ ಓಡಾಟ   

- Advertisement -
- Advertisement -

ಹಾಸನದ ಕೇಂದ್ರೀಯ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕೈಯಲ್ಲಿ ಲಾಂಗು ಹಿಡಿದು ಓಡಾಡಿದ್ದು, ಈ ಘಟನೆಯ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ಹೋಟೆಲ್‌ನಲ್ಲಿ ಈ ಮಹಿಳೆಯು ಕೆಲಸ ಮಾಡುತ್ತಿದ್ದು, ಅದೇ ಹೋಟೆಲ್‌ನಲ್ಲಿ ಕ್ಯಾಷಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಈ ವಿಷಯ ಮಹಿಳೆಯ ಪತಿಗೆ ಗೊತ್ತಾಗಿದ್ದು,  ಕ್ಯಾಷಿಯರ್ ಅನ್ನ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಪತಿಯು ಕೈಯಲ್ಲಿ ಲಾಂಗು ಹಿಡಿದುಕೊಂಡು ಹೋಟೆಲ್‌ ಕ್ಯಾಷಿಯರ್‌ ಮೇಲೆ ಹರಿಹಾಯುವಾಗ ಮಹಿಳೆ ಪತಿಯಿಂದ ಲಾಂಗು ಕಿತ್ತುಕೊಂಡು ಹಿಡಿದುಕೊಂಡಿದ್ದರು ಎನ್ನಲಾಗಿದೆ. 

ವಿಡಿಯೋದಲ್ಲಿ ಮಹಿಳೆ ತನ್ನ ಪತಿಯನ್ನು ನಿಯಂತ್ರಿಸುವ ಪ್ರಯತ್ನ ಮಾಡುತ್ತಿರುವ ದೃಶ್ಯಗಳಿವೆ. ಜಗಳ ಮಾಡಿದವರ ಹಿನ್ನೆಲೆ ಅಥವಾ ಮಹಿಳೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಆದರೆ, ಈ ದೃಶ್ಯ ವೈರಲ್‌ ಆಗಿದ್ದು ಅಚ್ಚರಿಯನ್ನೂ ಮೂಡಿಸಿದೆ.

- Advertisement -

Latest News

error: Content is protected !!