Saturday, June 28, 2025
Homeತಾಜಾ ಸುದ್ದಿಹಿಂದೂ ಯುವಕನನ್ನು ಪ್ರೀತಿಸಿ ವರಿಸಿದ ಮುಸ್ಲಿಂ ಯುವತಿ!; ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ 

ಹಿಂದೂ ಯುವಕನನ್ನು ಪ್ರೀತಿಸಿ ವರಿಸಿದ ಮುಸ್ಲಿಂ ಯುವತಿ!; ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ 

spot_img
- Advertisement -
- Advertisement -

ಚಿಕ್ಕಬಳ್ಳಾಪುರ: ಕಳೆದ ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಅನ್ಯಕೋಮಿನ ಜೋಡಿಗಳು ಪೋಷಕರ ವಿರೋಧದ ನಡುವೆಯೇ ಸಪ್ತಪದಿ ತುಳಿದು ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದ ಮೈಲಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಿವಾಹವಾದ ಜೋಡಿಗಳನ್ನು ಮೈಲಪ್ಪನಹಳ್ಳಿ ಗ್ರಾಮದ 24 ವರ್ಷದ ನಾಗಾರ್ಜುನ ಹಾಗೂ 22 ವರ್ಷದ ಪಸೀಹಾ ಎನ್ನಲಾಗಿದೆ.

ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಭಾನುವಾರದಂದು ರಾತ್ರಿ ಮದುವೆಯಾಗಿದ್ದಾರೆ. ಆದರೆ ಇವರ ಪ್ರೇಮ ಪ್ರಕರಣವು ಸೋಮವಾರದಂದು ತಮಗೆ ರಕ್ಷಣೆ ನೀಡಬೇಕೆಂದು ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಗೆ ಬಂದಾಗ ಬೆಳಕಿಗೆ ಬಂದಿದೆ.

ಇವರಿಬ್ಬರೂ ಅಕ್ಕಪಕ್ಕದ ಮನೆಯವರಾಗಿದ್ದಾರೆ. ಮೈಲಪ್ಪನಹಳ್ಳಿ ಗ್ರಾಮದಲ್ಲಿ ಹಿಂದೂ ಯುವಕ, ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸಿ ವಿವಾಹ ಆಗಿರುವುದು ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದೆ. ಪ್ರಕರಣದ ಕುರಿತಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ವಹಿಸಿದ್ದಾರೆ.

- Advertisement -
spot_img

Latest News

error: Content is protected !!