Sunday, June 7, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಅಕ್ರಮ ಸಕ್ರಮದಲ್ಲಿ ಜಾಮೀನು ಮಂಜೂರು ಭರವಸೆ: 4.95 ಲಕ್ಷ ಹಣ ಪಡೆದು ವಂಚಿಸಿದ...

ಬೆಳ್ತಂಗಡಿ : ಅಕ್ರಮ ಸಕ್ರಮದಲ್ಲಿ ಜಾಮೀನು ಮಂಜೂರು ಭರವಸೆ: 4.95 ಲಕ್ಷ ಹಣ ಪಡೆದು ವಂಚಿಸಿದ ವಿಎ.ಸುದೇಶ್ ಮತ್ತು ಪತ್ನಿ ವಿರುದ್ಧ ಎಫ್ಐಆರ್

- Advertisement -
- Advertisement -

ಬೆಳ್ತಂಗಡಿ : ಅಕ್ರಮ-ಸಕ್ರಮದಲ್ಲಿ ಜಮೀನು ಮಂಜೂರು ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 4.95 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಬಗ್ಗೆ ಮೂಡುಕೋಡಿ ಗ್ರಾಮದ ವಿ.ಎ ಸುದೇಶ್ ಕುಮಾರ್ ಹಾಗೂ ಅವರ ಪತ್ನಿ ಮೀನಾಕ್ಷಿ ಅವರ ವಿರುದ್ದ ವೇಣೂರು ಪೊಲೀಸ್ ಠಾಣೆಯಲ್ಲಿ ಮಾ.19 ರಂದು ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಮೂಡುಕೊಡಿ ಗ್ರಾಮದ ನಿವಾಸಿ ರೋಯಿ ವರ್ಗೀಸ್ ಎಂಬವರೇ ದೂರು ನೀಡಿದವರಾಗಿದ್ದಾರೆ.

ರೋಯಿ ವರ್ಗೀಸ್ ಅವರು ಮೂಡುಕೋಡಿ ಗ್ರಾಮದಲ್ಲಿ ಪಟ್ಟಾ ಜಮೀನು ಹೊಂದಿದ್ದು ಅದಕ್ಕೆ ತಾಗಿಕೊಂಡಿರುವ ಕುಮ್ಕಿ ಜಮೀನಿಗೆ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ಅಕ್ರಮ-ಸಕ್ರಮಕ್ಕೆ ಅರ್ಜಿ ಸಲ್ಲಿಸಿದ ಸಮಯ 1 ನೇ ಆಪಾದಿತನು ದಿನಾಂಕ: 22.03.2023 ರಂದು ಸರ್ವೆ ನಂಬ್ರ: 173/3 ಮತ್ತು 120/3 D1 ರ ಸರ್ವೆ ನಡೆಸಿ ಲಂಚ ನೀಡಲು ಬೇಡಿಕೆ ಇಟ್ಟ ಮೇರೆಗೆ ಪೀರ್ಯಾದಿದಾರರು 1 ನೇ ಆಪಾದಿತನ ಹೆಂಡತಿ ಮೀನಾಕ್ಷಿ ಸುದೇಶ್ ರವರ ಬ್ಯಾಂಕ್ ಖಾತೆಗೆ ದಿನಾಂಕ: 22.03.2023 ರಂದು 80,000/ ರೂ ಹಾಗೂ ತದನಂತರದ ದಿನಗಳಲ್ಲಿ ಒಟ್ಟು 5 ಸಲ ರೂ 4,55,000/- ವನ್ನು ವರ್ಗಾವಣೆ ಮಾಡಿದ್ದು ಅಲ್ಲದೇ ದಿನಾಂಕ: 22.03.2023 ರಂದು ರೂ 20.000/- ಹಾಗೂ 10.11.2023 ರಂದು 5.000/- ನಗದು ನೀಡಿದ್ದಲ್ಲದೇ, ದಿನಾಂಕ:19.11.2023 ರಂದು ಪಿರ್ಯಾದಿದಾರರು 1ನೇ ಆರೋಪಿತನ ಸೂಚನೆಯಂತೆ ಶರಣ್ ಶೆಟ್ಟಿ ಎಂಬವರ ಬ್ಯಾಂಕ್ ಖಾತೆಗೆ ಔತಣ ಕೂಟದ ಬಗ್ಗೆ 15.000/-ರೂ ವರ್ಗಾಯಿಸಿದ್ದು ತದನಂತರ 1ನೇ ಆರೋಪಿತನು ಪಿರ್ಯಾದಿದಾರರಲ್ಲಿ ನೀವು ನೀಡಿರುವ ಅಕ್ರಮ-ಸಕ್ರಮ ಜಮೀನು ಮಂಜೂರುಗೊಳಿಸಲು ಅದು ಅರಣ್ಯ ಇಲಾಖೆಗೆ ಸೇರಿರುವ ಜಮೀನು ಆಗಿರುವುದರಿಂದ ಸಾಧ್ಯವಿಲ್ಲ ಎಂದು ತಿಳಿಸಿದಾಗ ಪಿರ್ಯಾದಿದಾರರು ತಾನು ನೀಡಿದ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ 1ನೇ ಆರೋಪಿತನು ತಾನು ಯಾವುದೇ ಹಣವನ್ನು ನನ್ನ ಖಾತೆಗೆ ಸ್ವೀಕರಿಸಿರುವುದಿಲ್ಲ ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ಪಿರ್ಯಾದಾರರಿಂದ ವಿವಿಧ ದಿನಾಂಕದಂದು ಒಟ್ಟು 4.95.000/-ರೂ ಪಡೆದು ಜಮೀನು ಅಕ್ರಮ ಸಕ್ರಮದಲ್ಲಿ ಮಂಜೂರುಗೊಳಿಸುವುದಾಗಿ ತಿಳಿಸಿ ಜಮೀನು ಮಂಜೂರು ಮಾಡಿಸಿಕೊಡದೇ ಹಾಗೂ ಹಣವನ್ನು ವಾಪಾಸು ನೀಡದೇ ವಂಚನೆ ಮಾಡಿರುವುದಾಗಿದೆ. ಈ ಬಗ್ಗೆ ಮಾ.19 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ರೋಯಿ ವರ್ಗೀಸ್ ದೂರು ನೀಡಿದ್ದು ಅದರಂತೆ 1860 (u/s 417, 420) ಯಂತೆ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!