- Advertisement -
![]()
- Advertisement -
ಶಿರ್ವ: ಕಿಡಿಗೇಡಿಗಳ ಗುಂಪೊಂದು ಉಡುಪಿ ಜಿಲ್ಲೆಯ ಮೂಡುಬೆಳ್ಳೆ ಗ್ರಾಮದ ಕಟ್ಟಿಂಗೇರಿ ಬಳಿಯ ಕುದ್ರಮಲೆ ಪ್ರದೇಶದಲ್ಲಿ ಶಿಲುಬೆಯನ್ನು ಹಾಳುಗೆಡವಿದ ಘಟನೆ ನಡೆದಿದೆ.
ಕುದ್ರಮಲೆ ಬೆಟ್ಟದ ಕಾಡಿನ ಮಧ್ಯೆ ಇರುವ ಈ ಶಿಲುಬೆಯನ್ನು ಸುತ್ತಮುತ್ತಲಿನ ಕ್ರೈಸ್ತ ಕುಟುಂಬದವರು ಹಲವಾರು ವರ್ಷಗಳಿಂದ ಪೂಜೆ ಮಾಡಿಕೊಂಡು ಬರುತ್ತಿದ್ದು, ಶಿಲುಬೆಯನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವುದು ಫೆ.19ರಂದು ಬೆಳಕಿಗೆ ಬಂದಿದೆ. ಈ ಬಗ್ಗೆ ಫೆ.21ರಂದು ಕಟ್ಟಿಂಗೇರಿ ನಿವಾಸಿ ಪ್ಲಾಲೀವನ್ ಎಂಬವರು ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಉಡುಪಿ ಎಸ್.ಪಿ ಡಾ ಅರುಣ್ ಕುಮಾರ್, ಶಿರ್ವ ಠಾಣಾಧಿಕಾರಿ ಶಕ್ತಿವೇಲು ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
- Advertisement -


