Thursday, June 4, 2026
Homeತಾಜಾ ಸುದ್ದಿಸಾರ್ವಜನಿಕ ಜೀವನಕ್ಕೆ ಎರಡು ವಾರಗಳಲ್ಲಿ ಮರಳುವ ಭರವಸೆ ನೀಡಿದ ವಾಪಸ್ ಲಕ್ಷ್ಮೀ ಹೆಬ್ಬಾಳ್ಕರ್

ಸಾರ್ವಜನಿಕ ಜೀವನಕ್ಕೆ ಎರಡು ವಾರಗಳಲ್ಲಿ ಮರಳುವ ಭರವಸೆ ನೀಡಿದ ವಾಪಸ್ ಲಕ್ಷ್ಮೀ ಹೆಬ್ಬಾಳ್ಕರ್

- Advertisement -
- Advertisement -

ಬೆಳಗಾವಿ: ರಸ್ತೆ ಅಪಘಾತದಲ್ಲಿ ಗಾಯಗೊಂಡು, ಕಳೆದ ಒಂದು ತಿಂಗಳಿನಿಂದ ಜೀವನವು ತುಂಬಾ ಕಷ್ಟಕರವಾಗಿದ್ದು, ಇದೀಗ ಸಂಪೂರ್ಣ ವಿಶ್ರಾಂತಿಯ ಬಳಿಕ ಗುಣಮುಖಳಾಗುತ್ತಿದ್ದು,  ಇನ್ನೆರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ಮರಳುವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಅವರು ಫೆ.14ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನನ್ನ ದೈನಂದಿನ ಜೀವನವು ಜನರ ಮಧ್ಯೆಯೇ ನಡೆಯುತ್ತಿದ್ದು, ನಾನು ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿರುವೆ. ಈಗಲೂ ದೂರವಾಣಿ ಮೂಲಕ ಜನರ ಸಂಪರ್ಕದಲ್ಲಿರುವೆ. ಜನರ, ದೇವರ ಆಶೀರ್ವಾದದಿಂದ ಸಂಪೂರ್ಣ ಗುಣಮುಖಳಾಗಿದ್ದೇನೆ,” ಎಂದರು.

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ಜನವರಿ 14ರಂದು ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿದ್ದ ಕಾರು ಮರಕ್ಕೆ ಗುದ್ದಿತ್ತು.

- Advertisement -

Latest News

error: Content is protected !!