Wednesday, June 3, 2026
Homeಕರಾವಳಿಸುಬ್ರಮಣ್ಯ; ಅನುಮಾನಾಸ್ಪದವಾಗಿ ಮನೆಯಂಗಳಕ್ಕೆ ಬಂದ ಅಪರಿಚಿತರನ್ನು ಕೋವಿ ಹಿಡಿದು ಓಡಿಸಿದ ಮಹಿಳೆ

ಸುಬ್ರಮಣ್ಯ; ಅನುಮಾನಾಸ್ಪದವಾಗಿ ಮನೆಯಂಗಳಕ್ಕೆ ಬಂದ ಅಪರಿಚಿತರನ್ನು ಕೋವಿ ಹಿಡಿದು ಓಡಿಸಿದ ಮಹಿಳೆ

- Advertisement -
- Advertisement -

ಸುಬ್ರಮಣ್ಯ; ಅನುಮಾನಾಸ್ಪದವಾಗಿ ಮನೆಯಂಗಳಕ್ಕೆ ಬಂದ ಅಪರಿಚಿತರನ್ನು ಮಹಿಳೆ ಕೋವಿ ಹಿಡಿದು ಓಡಿಸಿದ ಘಟನೆ ಬಳ್ಪ ಗ್ರಾಮದಲ್ಲಿ ನಡೆದಿದೆ.  

ಬಳ್ಳ ಗ್ರಾಮದ ಕುಂಜತ್ತಾಡಿ ಕೊಡಂಗುಳಿ ಸೋಮಪ್ಪ ಗೌಡ ಎಂಬವರ ಮನೆಯಲ್ಲಿ  ಬೆಳಿಗ್ಗೆ 11 ಗಂಟೆ ಸುಮಾರಿಗೆ ನಾಯಿ ಬೊಗಳಿದೆ. ಶಬ್ದ ಕೇಳಿ ಮನೆಯಲ್ಲಿದ್ದ ಸೋಮಪ್ಪ ಗೌಡರ ಅತ್ತಿಗೆ ಸಾವಿತ್ರಿಯವರು ಮನೆಯಿಂದ ಹೊರಗೆ ಬಂದಾಗ ಕೊಟ್ಟಿಗೆ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ನಿಂತಿದ್ದ. ಆತನೊಂದಿಗೆ ವಿಚಾರಿಸಿದಾಗ ಯಾವುದೇ ಉತ್ತರ ನೀಡಲಿಲ್ಲವೆನ್ನಲಾಗಿದೆ. ಮಹಿಳೆ ಸೀದಾ ಮನೆಗೆ ಹೋಗಿ ಕೋವಿ ಹಿಡಿದುಕೊಂಡು ಬಂದಿದ್ದಾರೆ. ಈ ವೇಳೆ ಸಮೀಪದಲ್ಲೇ ಮತ್ತೊಬ್ಬ ಕೂಡಾ ನಿಂತಿದ್ದ ಎನ್ನಲಾಗಿದೆ. ಕೋವಿ ಹಿಡಿದು ಮಹಿಳೆ ಮುನ್ನುಗ್ಗಿದಾಗ ಇಬ್ಬರೂ ಓಡಿದರೆಂದು, ಸ್ವಲ್ಪ ದೂರ ಮಹಿಳೆ ಕೂಡಾ ಅವರನ್ನು ಓಡಿಸಿದರೆಂದು ತಿಳಿದು ಬಂದಿದೆ.

ಬಳಿಕ ಅವರು ಸ್ಥಳಿಯರಿಗೆ ವಿಷಯ ತಿಳಿಸಿ ಊರ ಕೆಲವರು ಪರಿಸರದಲ್ಲಿ ಹುಡುಕಾಡಿದರೆಂದು ತಿಳಿದು ಬಂದಿದೆ. ಸುಬ್ರಹ್ಮಣ್ಯ ಪೊಲೀಸ್‌ ಠಾಣೆಗೂ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಮಾಹಿತಿ ಪಡೆದು ಕೊಂಡಿದ್ದಾರೆ.

- Advertisement -

Latest News

error: Content is protected !!