Monday, June 8, 2026
Homeಕರಾವಳಿರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದುರಸ್ತಿ ಕಾಮಗಾರಿ; ವಾಹನ ಸವಾರರ ಪರದಾಟ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದುರಸ್ತಿ ಕಾಮಗಾರಿ; ವಾಹನ ಸವಾರರ ಪರದಾಟ

- Advertisement -
- Advertisement -

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಗುರುವಾರದಂದು ವಾಹನ ಸವಾರರು ರಸ್ತೆಯಲ್ಲಿ ಬಹಳಷ್ಟು ಪರದಾಡುವಂತಾಯಿತು.

ವಾಹನಗಳು ನೇತ್ರಾವತಿ ಸೇತುವೆಯಿಂದ ಕುಂಪಲ ಬೈಪಾಸ್‌ವರೆಗೂ ಸರತಿ ಸಾಲಿನಲ್ಲಿ ನಿಂತಿದ್ದವು. ಕೊಣಾಜೆಯಿಂದ ಮಂಗಳೂರು ಕಡೆಗೆ ತೆರಳುವ ವಾಹನಗಳೂ ಹಾಗೂ ಕೇರಳ ಕಡೆಯಿಂದ ಬರುವ ವಾಹನಗಳು ಒಂದು ಗಂಟೆ ರಸ್ತೆಯಲ್ಲೇ ಉಳಿದವು.

ಅಷ್ಟೇಅಲ್ಲದೆ ಮಂಗಳೂರಿನ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸ್‌ಗಳೂ ವಾಹನಗಳ ನಡುವೆ ಸಿಲುಕಿಕೊಂಡಿದ್ದವು.

- Advertisement -

Latest News

error: Content is protected !!