Sunday, June 7, 2026
Homeಆರಾಧನಾಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಘಟನೆಯಲ್ಲಿ 15 ಟೆಂಟ್ ಗಳು ಬೆಂಕಿಗಾಹುತಿ

ಮಹಾ ಕುಂಭಮೇಳದಲ್ಲಿ ಅಗ್ನಿ ಅವಘಡ; ಘಟನೆಯಲ್ಲಿ 15 ಟೆಂಟ್ ಗಳು ಬೆಂಕಿಗಾಹುತಿ

- Advertisement -
- Advertisement -

ಉತ್ತರಪ್ರದೇಶ: ಮಹಾ ಕುಂಭಮೇಳ ಪ್ರಯಾಗ್ ರಾಜ್ ನಲ್ಲಿ  ಗುರುವಾರ ಮುಂಜಾನೆ ಅಗ್ನಿ ಅವಘಡ ಸಂಭವಿಸಿದ್ದು, ಅವಘಡದಲ್ಲಿ  15 ಟೆಂಟ್ ಗಳು ಬೆಂಕಿಗಾಹುತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಲ್ಲಿನ ಚಟ್ನಾಗ್ ಘಾಟ್ ಬಳಿ ಬೆಂಕಿ ಅವಘಡ ಸಂಭವಿಸಿದ್ದು, ಹದಿನೈದು ಟೆಂಟ್‌ಗಳಿಗೆ ಬೆಂಕಿ ತಗುಲಿದ್ದು, ಈ ವೇಳೆ ತಕ್ಷಣವೇ ಬೆಂಕಿಯನ್ನು ನಂದಿಸಿದ ಪರಿಣಾಮ ಹೆಚ್ಚಿನ ಅನಾಹುತ ತಪ್ಪಿದೆ. ಇನ್ನು ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಅಗ್ನಿಶಾಮಕ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಇಲ್ಲಿನ ಸಂಗಮ್ ಪ್ರದೇಶದಲ್ಲಿ ಬುಧವಾರದಂದು ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 30 ಮಂದಿ ಸಾವನ್ನಪ್ಪಿದ್ದು, ನಲವತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

- Advertisement -

Latest News

error: Content is protected !!