Thursday, June 4, 2026
Homeಕರಾವಳಿಮಂಗಳೂರುಮಂಗಳೂರು;ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ

ಮಂಗಳೂರು;ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ

- Advertisement -
- Advertisement -

ಮಂಗಳೂರು;ಉದ್ಯಮಿಗೆ ಭೂಗತ ಪಾತಕಿಯಿಂದ ಬೆದರಿಕೆ ಕರೆ ಬಂದಿರುವ ಘಟನೆ  ಮಂಗಳೂರು ಹೊರವಲಯದ‌ ಬಜಪೆಯಲ್ಲಿ ನಡೆದಿದೆ. ಕೆಂಪು ಕಲ್ಲಿನ‌ ಕೋರೆ ಹಾಗು ಇತರ ಉದ್ಯಮ ನಡೆಸಿತ್ತಿರುವ ರೊನಾಲ್ಡ್  ಎಂಬವರಿಗೆ ಭೂಗತ ಪಾತಕಿ ಭೂಗತ ಪಾತಕಿ ಕಲಿ ಯೋಗಿಶ್ ಹೆಸರಲ್ಲಿ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

ಜ 17 ರಂದು ದೂರವಾಣಿ ಕರೆ ಮಾಡಿ 3 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಹಣ ನೀಡದಿದ್ದರೆ‌ ಮನೆಯವರನೆಲ್ಲ ಕೊಲೆ‌ ಮಾಡುವುದಾಗಿ ಭೂಗತ ಪಾತಕಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ನಿನ್ನೆ ಬಜಪೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರು ತನಿಖೆ‌ ಆರಂಭಿಸಿದ್ದಾರೆ.

- Advertisement -

Latest News

error: Content is protected !!