Saturday, June 6, 2026
Homeಕೊಡಗುಮಡಿಕೇರಿ: ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು

ಮಡಿಕೇರಿ: ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವು

- Advertisement -
- Advertisement -

ಮಡಿಕೇರಿ: ಆಕಸ್ಮಿಕವಾಗಿ ಗುಂಡು ಹಾರಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಡಿಕೇರಿ ತಾಲೂಕು ಚೇರಂಬಾಣೆಯಲ್ಲಿ ನಡೆದಿದೆ. ಚೇರಂಬಾಣೆಯ ಪೊನ್ನಚೆಟ್ಟಿರ ಮಿತ್ರ ಚಂಗಪ್ಪ (49) ಮೃತ ವ್ಯಕ್ತಿ.

ಚೇರಂಬಾಣೆ ಪಟ್ಟಣದಲ್ಲಿ ವೈನ್ ಶಾಪ್ ಹೊಂದಿರುವ ಮಿತ್ರ ಅವರು ರಾತ್ರಿ 12 ಗಂಟೆ ಸಮಯದಲ್ಲಿ ವೈನ್ ಶಾಪ್ ಮುಚ್ಚಿ ಬಂದೂಕಿನೊಂದಿಗೆ ಹೊ ರಬಂದಿದ್ದಾರೆ. ಇದೇ ಸಂದರ್ಭ ಹಾಲು ಸರಬರಾಜಿನ ವಾಹನ ಬಂದಿದ್ದು, ಮಿತ್ರ ಚಂಗಪ್ಪ ಅವರು ಹಾಲು ಕೊಂಡುಕೊಳ್ಳಲೆಂದು ಕೈಯಲ್ಲಿದ್ದ ಬಂದೂಕು ಅನ್ನು ಸ್ಕೂಟರ್ ಮೇಲಿಟ್ಟಿದ್ದಾರೆ. ಈ ಸಂದರ್ಭ ಕೆಳಗೆ ಬಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಹಾರಿ ಮಿತ್ರ ಅವರ ಸೊಂಟದ ಭಾಗಕ್ಕೆ ತಗುಲಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!