Friday, June 5, 2026
Homeಕರಾವಳಿತುಳು ಚಲನಚಿತ್ರ ‘ಮೀರಾ’ ಫೆಬ್ರವರಿ 21ಕ್ಕೆ ದೇಶದಾದ್ಯಂತ ತೆರೆಗೆ

ತುಳು ಚಲನಚಿತ್ರ ‘ಮೀರಾ’ ಫೆಬ್ರವರಿ 21ಕ್ಕೆ ದೇಶದಾದ್ಯಂತ ತೆರೆಗೆ

- Advertisement -
- Advertisement -

ಮಂಗಳೂರು: ಅಸ್ತ್ರ ಪ್ರೊಡಕ್ಷನ್‌ನ ಬ್ಯಾನರ್‌ ಅಡಿಯಲ್ಲಿ, ಅಶ್ವತ್ಥ್ ನಿರ್ದೇಶನದಲ್ಲಿ ನಿರ್ಮಾಣವಾಗಿರುವ ಮಹಿಳಾ ಪ್ರಧಾನ ತುಳು ಚಲನಚಿತ್ರ ‘ಮೀರಾ’ ಫೆಬ್ರುವರಿ 21ರಂದು ದೇಶದಾದ್ಯಂತ ತೆರೆ ಕಾಣಲಿದೆ.

ಈ ಕುರಿತಂತೆ ಮಂಗಳೂರಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದ್ದು ನಿರ್ಮಾಪಕ ಲಂಚುಲಾಲ್ ಕೆ.ಎಸ್, ‘ಚಿತ್ರವು ತುಳು ಚಿತ್ರರಂಗದಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ತುಳು ಚಿತ್ರರಂಗದಲ್ಲಿ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಕೆ ಮಾಡಿ ಹಾಡನ್ನು ರೂಪಿಸಲಾಗಿದೆ,’ ಎಂದು ಮಾಹಿತಿ ನೀಡಿದರು.

ಒಟ್ಟಾರೆಯಾಗಿ ಚಿತ್ರದಲ್ಲಿ ಐದು ಹಾಡುಗಳಿದ್ದು, ಮಧುಬಾಲಕೃಷ್ಣ ಸೇರಿದಂತೆ ಪ್ರಸಿದ್ಧ ಗಾಯಕರ ಧ್ವನಿಯಲ್ಲಿ ಮೂಡಿಬಂದಿದೆ ಎಂದರು.

ಚಿತ್ರ ಪ್ರಮುಖ ಪಾತ್ರದಲ್ಲಿ ಇಶಿತಾ ಶೆಟ್ಟಿ ಕಾಣಿಸಿಕೊಂಡಿದ್ದು, ಅರವಿಂದ್ ಬೋಳಾರ್, ಸ್ವರಾಜ್ ಶೆಟ್ಟಿ, ಜೆ.ಪಿ.ತೂಮಿನಾಡು, ಪ್ರಕಾಶ್ ತೂಮಿನಾಡು, ಮಂಜು ರೈ ಮೂಳೂರು, ರೂಪಶ್ರೀ ವರ್ಕಾಡಿ, ಯತೀಶ್ ಪೂಜಾರಿ, ಅಶ್ವತ್ಥ್, ಬೇಬಿ ಲಕ್ಷ್ಯ ಎಲ್, ತುಳು ಬ್ಲಾಗರ್ ರಕ್ಷಿತಾ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿದೆ.

‘ಮೀರಾ’ ಚಲನಚಿತ್ರದ ಡಿಒಪಿ ಅಜಯ್ ಕೆ.ಎಸ್, ಜಾಬಿನ್ಸ್ ಸೆಬಾಸ್ಟಿಯನ್ ಸಂಕಲನ, ರಜ್ನು ಜಯಪ್ರಕಾಶ್ ಸಂಗೀತ ಸಂಯೋಜನೆ, ಜಯಪ್ರಕಾಶ್ ಕಳೇರಿ ಗೀತೆ ರಚನೆ ಮಾಡಿದ್ದಾರೆ. ಮಲಯಾಳಂ ಸಿನೆಮಾ ‘ಭ್ರಮಯುಗಂ’ ಖ್ಯಾತಿಯ ಲಿಜು ಪ್ರಭಾಕರ್ ಚಿತ್ರದ ಡಿ.ಐ ವಿಭಾಗ ನಿರ್ವಹಿಸುತ್ತಿದ್ದಾರೆ.

- Advertisement -

Latest News

error: Content is protected !!