ಬೆಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿಗಳ ಘೋಷಣೆಯಾಗಿದ್ದು, ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ತೆಂಕತಿಟ್ಟು ಯಕ್ಷಗಾನ ಕಲಾವಿದ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ ತಲ್ಲೂರು ಶಿವರಾಮ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
2024ನೇ ಸಾಲಿನ ಗೌರವ ಪ್ರಶಸ್ತಿಗೆ ಬೆಳ್ತಂಗಡಿಯ ಕೊಳ್ತಿಗೆ ನಾರಾಯಣ ಗೌಡ, ಕುಂದಾಪುರದ ಕೋಡಿ ವಿಶ್ವನಾಥ ಗಾಣಿಗ, ಬಂಟ್ಚಾಳದ ರಾಘವ ದಾಸ್, ಬಂಟ್ವಾಳದ ಸುಬ್ರಾಯ ಹೊಳ್ಳ, ತುಮಕೂರಿನ ಕಾಂತರಾಜು ಅವರನ್ನು ಆಯ್ಕೆ ಮಾಡಲಾಗಿದೆ.
10 ಕಲಾವಿದರಿಗೆ ಯಕ್ಷಸಿರಿ ಪ್ರಶಸ್ತಿ: ಹಿರಿಯ ಅರ್ಥಧಾರಿ ಕಾಸರಗೋಡಿನ ಅಡ್ಕ ಗೋಪಾಲಕೃಷ್ಣ ಭಟ್, ಯಕ್ಷಗಾನ ಕಲಾವಿದ ಜಗನ್ನಾಥ ಆಚಾರ್ಯ ಎಳ್ಳಂಪಳ್ಳಿ ಬಡಗುತಿಟ್ಟು, ಕಾಸರಗೋಡಿನ ಹಾಸ್ಯಗಾರ ಮವ್ವಾರು ಬಾಲಕೃಷ್ಣ ಮಣಿಯಾಣಿ ತೆಂಕುತಿಟ್ಟು, ಸ್ತ್ರೀ ವೇಷಧಾರಿ ಶಿವಮೊಗ್ಗದ ಶಿವಾನಂದ ಗೀಜಗಾರು, ಬಡಗುತಿಟ್ಟು, ಬಣ್ಣದ ವೇಷಧಾರಿ ಮಂಗಳೂರಿನ ಉಮೇಶ್ ಕುಪ್ಪೆಪದವು ತೆಂಕುತಿಟ್ಟು, ಸ್ತ್ರೀ ವೇಷಧಾರಿ ಹೊನ್ನಾವರದ ಮುಗ್ವಾ ಗಣೇಶ್ ನಾಯ್ಕ ಬಡಗುತಿಟ್ಟು, ಸ್ತ್ರೀ ವೇಷಧಾರಿ ಮಂಗಳೂರಿನ ಸುರೇಂದ್ರ ಮಲ್ಲಿ ತೆಂಕುತಿಟ್ಟು, ಮಂಗಳೂರಿನ ಅಂಡಾಲ ದೇವಿಪ್ರಸಾದ ಶೆಟ್ಟಿ ಯಕ್ಷಗಾನ ಪ್ರಸಂಗಕರ್ತ ಮತ್ತು ಭಾಗವತ, ಬೆಂಗಳೂರು ಗ್ರಾಮಾಂತರ ಕೃಷ್ಣಪ್ಪ ಮೂಡಲಪಾಯ ಯಕ್ಷಗಾನ, ಚಿಕ್ಕಮಗಳೂರಿನ ಹಳುವಳ್ಳಿ ಜ್ಯೋತಿ ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ.
ಪ್ರಶಸ್ತಿ ಪ್ರದಾನ ಫೆ.16ರಂದು ಉಡುಪಿಯ ಕಲಾರಂಗದ ಸಭಾಂಗಣದಲ್ಲಿ ನಡೆಯಲಿದೆ.