Saturday, June 6, 2026
Homeತಾಜಾ ಸುದ್ದಿಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಜಭಾರಿಯಾಗಿ ನಟ ಕಿಶೋರ್‌ ಆಯ್ಕೆ

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಜಭಾರಿಯಾಗಿ ನಟ ಕಿಶೋರ್‌ ಆಯ್ಕೆ

- Advertisement -
- Advertisement -

ಬೆಂಗಳೂರು: ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರಿನಲ್ಲಿ ನಡೆಯುವ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಜಭಾರಿಯನ್ನಾಗಿ ಖ್ಯಾತ ನಟ ಕಿಶೋರ್‌ ಕುಮಾರ್‌ ಜಿ. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಬಾರಿಯ ಚಲನ ಚಿತ್ರೋತ್ಸವವು ‘ಸರ್ವ ಜನಾಂಗದ ಶಾಂತಿಯ ತೋಟ’ ಶೀರ್ಷಿಕೆಯಡಿ ನಡೆಯಲಿದೆ. ಚಿತ್ರೋತ್ಸವದಲ್ಲಿ ಸುಮಾರು 60 ದೇಶಗಳ ಸಿನಿಮಾಗಳು ಭಾಗವಹಿಸಲಿದ್ದು, ಕನ್ನಡ ಸೇರಿದಂತೆ ವಿವಿಧ ಭಾಷೆಗಳ 200 ಚಲನಚಿತ್ರಗಳು 13 ಚಿತ್ರಮಂದಿರಗಳಲ್ಲಿ 400 ಪ್ರದರ್ಶನಗೊಳ್ಳಲಿವೆ.

ಕಿಶೋರ್ ಅವರು ಈಗಾಗಲೇ ಹಿಂದಿ ಹಾಗೂ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿಯೂ ನಟಿಸಿ ಜನಪ್ರಿಯತೆ ಗಳಿಸಿದ್ದಾರೆ. ಮಾರ್ಚ್ 1 ರಿಂದ 8 ರವರೆಗೆ ಬೆಂಗಳೂರಿನಲ್ಲಿ ನಡೆಯುವ ಚಿತ್ರೋತ್ಸವಕ್ಕೆ ಹೆಚ್ಚಿನ ಪ್ರಚಾರ ತಂದುಕೊಡುವ ಸಲುವಾಗಿ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ. 

- Advertisement -

Latest News

error: Content is protected !!