- Advertisement -
![]()
- Advertisement -
ಚಿಕ್ಕಮಗಳೂರು : ಆರು ಜನ ನಕ್ಸಲ್ ಶರಣಾಗತಿಯ ಬಗ್ಗೆ ಅಂತಿಮ ಸಿದ್ದತಾ ಸಭೆ ಪಶ್ಚಿಮಘಟ್ಟದ ಸರಕಾರಿ ತಾಣವೊಂದರಲ್ಲಿ ಜ.7 ರಂದು ರಾತ್ರಿ ನಡೆಯಿತು.
ನಕ್ಸಲ್ ಪುನರ್ ವಸತಿ ಸಮಿತಿ, ಶಾಂತಿಗಾಗಿ ನಾಗರಿಕರ ವೇದಿಕೆ ಹಾಗೂ ಗೃಹ ಇಲಾಖೆಯ ಉನ್ನತಾಧಿಕಾರಿಗಳೊಂದಿಗೆ ಚರ್ಚೆ ನಡೆಯಿತು. ಜ.8 ರಂದು (ನಾಳೆ) ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ 12 ಗಂಟೆಗೆ ಆರು ಜನ ನಕ್ಸಲರು ಮುಖ್ಯವಾಹಿನಿಗೆ ಬರಲಿದೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಲಾಯಿತು.

ಶರಣಾಗತಿ ಬಗ್ಗೆ ಸಭೆಯಲ್ಲಿ ಡಾ. ಬಂಜಗೆರೆ ಜಯಪ್ರಕಾಶ್, ಮಾಜಿ ನಕ್ಸಲ್ ನಾಯಕ ನೂರ್ ಶ್ರೀಧರ್, ಕೆ. ಪಿ. ಶ್ರೀಪಾಲ್, ಗುಪ್ತಚರ ಇಲಾಖೆ ಎಸ್ಪಿ ಹರಿರಾಮ್ ಶಂಕರ್, ಪಾರ್ವತೀಶ ಬಿಳಿದಾಳೆ ಉಪಸ್ಥಿತರಿದ್ದರು.
- Advertisement -


