Sunday, June 7, 2026
Homeಕರಾವಳಿಮಂಗಳೂರುಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಒಂದೇ ದಿನ ಎರಡು ಕಳ್ಳತನ ಪ್ರಕರಣ

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಒಂದೇ ದಿನ ಎರಡು ಕಳ್ಳತನ ಪ್ರಕರಣ

- Advertisement -
- Advertisement -

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಒಂದೇ ದಿನ ಎರಡು ಕಳ್ಳತನ ಪ್ರಕರಣಗಳು ನಡೆದಿವೆ. ಕಡಬ ಸಮೀಪದ ನೆಕ್ಕಿತ್ತಡ್ಕ ನಿವಾಸಿ ಹಬೀಬ ಅವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರ ಬ್ಯಾಗ್‌ನಿಂದ 15 ಪವನ್ ಚಿನ್ನಾಭರಣವನ್ನು ಯಾರೋ ಖದೀಮರು ಎಗರಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕೋಡಿಂಬಾಡಿ ದಾರಂದಕುಕ್ಕು ನಿವಾಸಿ ಝಾಹಿದಾ ಅವರು ಉಪ್ಪಿನಂಗಡಿ ಹಳೇ ಬಸ್ ನಿಲ್ದಾಣದ ಬಳಿಯಲ್ಲಿ ಕ್ಲಿನಿಕ್‌ಗೆ ಬಂದಿದ್ದು, ವೈದ್ಯರನ್ನು ಭೇಟಿ ಮಾಡಿ ಮರಳಿ ಮನೆಗೆ ಹೋಗುವಾಗ ಬಸ್ ನಿಲ್ದಾಣದಲ್ಲಿ ಪುತ್ತೂರು ಕಡೆ ಹೋಗುವ ಬಸ್ ಹತ್ತಿ ದಾರಂದಕುಕ್ಕು ತಲುಪುವಷ್ಟರಲ್ಲಿ ಅವರಗಿ ಬ್ಯಾಗ್‌ನಲ್ಲಿದ್ದ 25 ಸಾವಿರ ರೂ. ಕದ್ದಿದ್ದಾರೆ ಎಂದು ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!