Sunday, June 7, 2026
Homeಕರಾವಳಿಮಂಗಳೂರುಮಂಗಳೂರು : ಟಿಪ್ಪರ್ ಲಾರಿ ಮತ್ತು ಬೈಕಿನ ನಡುವೆ ಅಪಘಾತ; ಯುವಕ ಸಾವು

ಮಂಗಳೂರು : ಟಿಪ್ಪರ್ ಲಾರಿ ಮತ್ತು ಬೈಕಿನ ನಡುವೆ ಅಪಘಾತ; ಯುವಕ ಸಾವು

- Advertisement -
- Advertisement -

ಮಂಗಳೂರು : ಟಿಪ್ಪರ್ ಲಾರಿ ಮತ್ತು ಬೈಕಿನ ನಡುವೆ ಅಪಘಾತ ಸಂಭವಿಸಿ ಯುವಕ ಸಾವನ್ನಪ್ಪಿರುವ ಘಟನೆ ಕೋಣಾಜೆಯಲ್ಲಿ ನಡೆದಿದೆ. ದೇರಳಕಟ್ಟೆ ನಿವಾಸಿ ಜಲೀಲ್ ಎಂಬವರ ಪುತ್ರ ಅವ್ಸಾಫ್ (25) ಮೃತ ಯುವಕ.

ಅಸೈಗೋಳಿ ಬಳಿಯ ತಿಪ್ಲಪದವು ಎಂಬಲ್ಲಿ ತಿಪ್ಲಪದವು ಗ್ಯಾರೇಜ್ ಬಳಿಯಿಂದ ರಸ್ತೆಯಲ್ಲಿ ಲಾರಿ ಯುಟರ್ನ್ ತೆಗೆದುಕೊಳ್ಳುತ್ತಿದ್ದಾಗ ಅಸೈಗೋಳಿ ಕಡೆಯಿಂದ ಬರುತ್ತಿದ್ದ ಬೈಕ್ ನಡುವೆ ಢಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಸವಾರ ಅವ್ಸಾಫ್ ಗಂಭೀರ ಗಾಯಗೊಂಡಿದ್ದಾರೆ.  ಅವರನ್ನು ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಆದರೆ , ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

- Advertisement -

Latest News

error: Content is protected !!