Tuesday, July 1, 2025
Homeಕರಾವಳಿಮಂಗಳೂರುಕಡಬ; ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ವಂಚನೆ ಆರೋಪ: ಕೋಡಿಂಬಾಳದ ಯುವಕನ ಬಂಧನ

ಕಡಬ; ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ವಂಚನೆ ಆರೋಪ: ಕೋಡಿಂಬಾಳದ ಯುವಕನ ಬಂಧನ

spot_img
- Advertisement -
- Advertisement -

ಕಡಬ; ಪ್ರೀತಿ ಹೆಸರಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ವಂಚನೆ ಆರೋಪದಡಿ ಕೋಡಿಂಬಾಳದ ಯುವಕನನ್ನು ಬಂಧಿಸಲಾಗಿದೆ. ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿ ಬಂಧಿತ ಆರೋಪಿ.

ಆರೋಪಿ ಪ್ರವೀಣ್ ಪೂಜಾರಿ ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ  ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ಆಕೆಯ ವಿಶ್ವಾಸ ಗಳಿಸಿ ಬಳಿಕ  ಬಾಡಿಗೆ ರೂಂಗೆ ಕರೆದೊಯ್ಡು ದೈಹಿಕ ಸಂಪರ್ಕ ಬೆಳೆಸಿದಲ್ಲದೆ  ವೀಡಿಯೋ ಚಿತ್ರೀಕರಿಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದನ್ನು ಎಂದು ಆರೋಪಿಸಿಲಾಗಿದೆ.

ಪ್ರವೀಣ್ ಪ್ರೀತಿ ಹೆಸರಲ್ಲಿ ಅಪ್ರಾಪ್ತೆ ಜೊತೆ ಅನೇಕ ಕಡೆ ಸುತ್ತಾಡಿದ್ದ.  ಅನೇಕ ಬಾರಿ  ಪುತ್ತೂರು ಬಳಿಯ ಬಾಡಿಗೆ ರೂಂ ಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದ.  ಅಲ್ಲದೆ ಗರ್ಭಿಣಿಯಾಗದಂತೆ ಮಾತ್ರೆಯನ್ನು ತಂದು ಕೊಟ್ಟಿದ್ದ. ಇದರ ಜೊತೆಗೆ ಖಾಸಗಿ ಕ್ಷಣದ  ನಗ್ನ  ವೀಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ  ಎಂದು ದೂರಿನಲ್ಲಿ ಅಪ್ರಾಪ್ತೆ ಉಲ್ಲೇಖಿಸಿದ್ದಾಳೆ.

ಡಿ.30 ರಂದು ಕುಂಬ್ರದಲ್ಲಿರುವ ಬಾಡಿಗೆ  ರೂಂಗೆ ಕರೆದೊಯ್ದು ಅಲ್ಲೇ ಉಳಿದುಕೊಂಡು  ದೈಹಿಕ ಸಂಪರ್ಕ ಬೆಳೆಸಿದ್ದ. ಮರುದಿನ (ಡಿ.31ರಂದು)  ರೂಂ ನಲ್ಲಿ  ಇರುವಾಗಲೇ  ಅಪ್ರಾಪ್ತೆಯು  ತನ್ನ ತಂದೆಗೆ ಕರೆ ಮಾಡಿದ ವಿಚಾರವಾಗಿ ತಗಾದೆ ತೆಗೆದು ದೈಹಿಕ ಹಿಂಸೆ ನೀಡಿ ಜಗಳವಾಡಿದ್ದ. ಬಳಿಕ ಫರಂಗಿಪೇಟೆ ಬಳಿ ರಸ್ತೆ ಬದಿ ಬೈಕಿನಲ್ಲಿ ಬಿಟ್ಟು ಹೋಗಿದ್ದ.

ನೊಂದ ಅಪ್ರಾಪ್ತೆ  ಆತನಿಗೆ ಕರೆ ಮಾಡಿದರೂ ಉತ್ತರಿಸಿದ ಹಿನ್ನೆಲೆ ನೊಂದು ಆತ್ಮಹತ್ಯೆಗೆ ಯತ್ನಿಸುವ ನಿರ್ಧಾರಕ್ಕೆ ಬಂದು ಪೋನ್ ಮೂಲಕ  ಮನೆಯವರ ಜೊತೆ ಮಾತನಾಡಿ ವಿಷಯ ತಿಳಿಸಿದ ಹಿನ್ನೆಲೆ ಮನೆಯವರು ಧೈರ್ಯ ತುಂಬಿ ಮನೆಗೆ ಕರೆದುಕೊಂಡು ಬಂದಿದ್ದರು. ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಆ ವಿಷಯವನ್ನು ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರು ಸ್ವೀಕರಿದ ಕಡಬ ಪೊಲೀಸರು ಸುಳ್ಯದಲ್ಲಿದ್ದ  ಯುವಕನನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ವಿರುದ್ದ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!