Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ಹೊಸ ವರ್ಷಾಚರಣೆಗೆ ಬೀಚ್ ಪಾರ್ಟಿಗೆ ಅವಕಾಶ; ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

ಮಂಗಳೂರು: ಹೊಸ ವರ್ಷಾಚರಣೆಗೆ ಬೀಚ್ ಪಾರ್ಟಿಗೆ ಅವಕಾಶ; ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

- Advertisement -
- Advertisement -

ಮಂಗಳೂರು: ಕೆಲವು ವರ್ಷಗಳ ಬಳಿಕ ಹೊಸ ವರ್ಷಾಚರಣೆಗೆ ಬೀಚ್ ಪಾರ್ಟಿಗಳಿಗೆ ಮಂಗಳೂರಿನಲ್ಲಿ ಅವಕಾಶ ನೀಡಲಾಗಿದೆ.

ಪಣಂಬೂರು ಬೀಚ್ ನಲ್ಲಿ ನೈಟ್ ಪಾರ್ಟಿಗೆ ಅನುಮತಿ ನೀಡಲಾಗಿದ್ದು, ಡಿಜೆ, ಡ್ಯಾನ್ಸ್ ಮತ್ತು ಮ್ಯೂಸಿಕಲ್ ನೈಟ್ ಆಯೋಜಿಸಲಾಗಿದೆ. ಮಧ್ಯರಾತ್ರಿ 12 ಗಂಟೆಯವರೆಗೆ ಕುಟುಂಬ ಸಮೇತ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಇನ್ನು ಹೊಸ ವರ್ಷಾಚರಣೆಗಾಗಿ ಮಂಗಳೂರಿನಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಬಹುತೇಕ ಬೀಚ್ ರೆಸಾರ್ಟ್ ಗಳು ಮತ್ತು ಹೋಮ್ ಸ್ಟೇ ಗಳು ಭರ್ತಿಯಾಗಿವೆ.

ಮಂಗಳೂರಿನ ಬೀಚ್ ಗಳಲ್ಲಿ, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಮೋಜು, ಮಸ್ತಿ ನಡೆದಿದ್ದು, ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸಿದ್ದಾರೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪ್ರಮುಖ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಕೂಡಾ ಏರ್ಪಡಿಸಲಾಗಿದೆ.

- Advertisement -

Latest News

error: Content is protected !!