Wednesday, June 3, 2026
Homeಕರಾವಳಿಮಂಗಳೂರುಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

- Advertisement -
- Advertisement -

ಮಂಗಳೂರು: ಹೊಸ ವರ್ಷಾಚರಣೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹಿನ್ನಲೆ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 49 ಕಡೆ ಹೊಸ ವರ್ಷಾಚರಣೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ

19 ಕಡೆ ಚೆಕ್ ಪೋಸ್ಟ್ ತೆರೆಯಲಾಗಿದ್ದು, ರಾತ್ರಿ ಗಸ್ತಿಗೆ ಪಿಎಸ್ ಐ ರ‌್ಯಾಂಕ್ ಅಧಿಕಾರಿಯನ್ನೊಳಗೊಂಡ 60 ಸೆಕ್ಟರ್ ಮೊಬೈಲ್ ಟೀಮ್ ರಚಿಸಲಾಗಿದೆ.

ಅಲ್ಲದೇ, ಸಂಭ್ರಮಾಚರಣೆಯ ನೆಪದಲ್ಲಿ ಡ್ರಗ್ಸ್ ಸೇವನೆ, ಮಾರಾಟ ಮತ್ತು ಅನಧಿಕೃತ ಚಟುವಟಿಕೆ ತಡೆಯಲು ಪಿಎಸ್ಐ ರ‌್ಯಾಂಕ್ ಅಧಿಕಾರಿಯನ್ನೊಳಗೊಂಡ 30 ತಂಡಗಳನ್ನು ಸ್ಥಾಪಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್ ಆರ್ ಪಿ ಮತ್ತು ಸಿಎಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.

ಈ ಮಧ್ಯೆ ರಾತ್ರಿ ವೇಳೆ ಸಂಚಾರ ನಿಯಮ‌ ಉಲ್ಲಂಘನೆ ತಡೆಗೆ 17 ಕಡೆ ಚೆಕ್ ಪೋಸ್ಟ್ ಮತ್ತು ಮದ್ಯ ಸೇವಿಸಿ ವಾಹನ ಚಲಾಯಿಸುವವರನ್ನು ಪತ್ತೆ ಹಚ್ಚಲು ಎಂಟು ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಪೊಲೀಸ್ ಇಲಾಖೆ ತೆರೆದಿದೆ.

- Advertisement -

Latest News

error: Content is protected !!