Wednesday, June 3, 2026
Homeತಾಜಾ ಸುದ್ದಿಕೊರೋನಾದಿಂದ ವಿಧಿವಶರಾದ ರಾಂಪುರ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ

ಕೊರೋನಾದಿಂದ ವಿಧಿವಶರಾದ ರಾಂಪುರ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ

- Advertisement -
- Advertisement -

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲೂಕಿನ ರಾಂಪುರ, ಚನ್ನಗಿರಿ ತಾಲೂಕಿನ ಬಸವಪಟ್ಟಣ ಗವಿಮಠ ಪೀಠಾಧ್ಯಕ್ಷ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ (ಹಾಲಸ್ವಾಮಿ) ಮಹಾಮಾರಿ ಕೊರೋನಾದಿಂದಾಗಿ ವಿಧಿವಶರಾಗಿದ್ದಾರೆ.

ಮುಳ್ಳುಗದ್ದಿಗೆಗೆ ಪ್ರಸಿದ್ದಿ ಹೊಂದಿದ್ದ 55 ವರ್ಷದ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಪರಂಪರೆಯ ಪ್ರಮುಖ ಶ್ರೀಗಳಾಗಿದ್ದರು.

ಸ್ವಾಮೀಜಿ ಕಳೆದ 10 ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ. ಭಕ್ತರು ಆಸ್ಪತ್ರೆಗೆ ದಾಖಲಾಗುವಂತೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಆದರೂ ಸ್ವಾಮೀಜಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲು ಒಪ್ಪಿರಲಿಲ್ಲ ಎನ್ನಲಾಗಿದೆ.

ಆದರೆ ಕೊನೆಗೆ ಎರಡು ದಿನಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು ಉಸಿರಾಟ ತೊಂದರೆ, ಶುಗರ್ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!