Wednesday, June 3, 2026
Homeಕರಾವಳಿಉಡುಪಿದಕ್ಷಿಣಕನ್ನಡದಲ್ಲಿಂದು 76 ಮಂದಿಗೆ ಕೊರೊನಾ ಸೋಂಕು, ಓರ್ವ ಮಹಿಳೆ ಹೆಮ್ಮಾರಿಗೆ ಬಲಿ, ಉಡುಪಿಯಲ್ಲಿ 52 ಮಂದಿಗೆ...

ದಕ್ಷಿಣಕನ್ನಡದಲ್ಲಿಂದು 76 ಮಂದಿಗೆ ಕೊರೊನಾ ಸೋಂಕು, ಓರ್ವ ಮಹಿಳೆ ಹೆಮ್ಮಾರಿಗೆ ಬಲಿ, ಉಡುಪಿಯಲ್ಲಿ 52 ಮಂದಿಗೆ ಕೋವಿಡ್ ದೃಢ

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ಮೂರು ದಿನಗಳ ಹೆಲ್ತ್ ಬುಲೆಟಿನ್ ಗಮನಿಸಿದರೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿರೋದು ಕಂಡು ಬರುತ್ತಿರೋದು ಕೊಂಚ ಮಟ್ಟಿಗೆ ಸಮಾಧಾನ ತಂದಿದೆ. ಜಿಲ್ಲೆಯಲ್ಲಿ ಇಂದು 76 ಹೊಸಕೊರೊನಾ ಪ್ರಕರಣಗಳು ವರದಿಯಾಗಿವೆ. ಹಾಗೇ ಓರ್ವ ಮಹಿಳೆಯನ್ನು ಇಂದು ಕೊರೊನಾ ಬಲಿ ಪಡೆದುಕೊಂಡಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇದುವರೆಗೂ 2520ದ ಕೇಸುಗಳು ಪತ್ತೆಯಾಗಿದ್ದು, 907 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 1566 ಸಕ್ರೀಯ ಪ್ರಕರಣಗಳಿವೆ. ಹಾಗೇ ಇಂದು 21 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ 46 ಮಂದಿಯನ್ನು ಬಲಿ ಪಡೆದಿದೆ.

ಹಾಗೇ ಉಡುಪಿಯಲ್ಲಿ ಇಂದು 52 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಉಡುಪಿಯಲ್ಲಿ ಇದುವೆರಗೂ 1787 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1371 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು ಇವತ್ತು 22 ಮಂದಿ ಡಿಸ್ಚಾರ್ಜ್ ಆಗಿದ್ದು, ಸದ್ಯ ಉಡುಪಿಯಲ್ಲಿ 413 ಸಕ್ರೀಯ ಪ್ರಕರಣಗಳಿವೆ. ಅಲ್ಲದೇ ಇದುವೆರಗೂ 3 ಮಂದಿ ಉಡುಪಿಯಲ್ಲಿ ಕೊರೊನಾಗೆ ಬಲಿಯಾಗಿದ್ದಾರೆ.

- Advertisement -

Latest News

error: Content is protected !!