Saturday, June 13, 2026
Homeಕರಾವಳಿಉಡುಪಿಉಡುಪಿ: ಕೊಡ ತೆಗೆಯಲು ಬಾವಿಗಿಳಿದ ವ್ಯಕ್ತಿ ನೀರಿಗೆ ಬಿದ್ದು ಸಾವು

ಉಡುಪಿ: ಕೊಡ ತೆಗೆಯಲು ಬಾವಿಗಿಳಿದ ವ್ಯಕ್ತಿ ನೀರಿಗೆ ಬಿದ್ದು ಸಾವು

- Advertisement -
- Advertisement -

ಉಡುಪಿ: ಕೊಡ ತೆಗೆಯಲು ಬಾವಿಗಿಳಿದ ವ್ಯಕ್ತಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸರಳೆಬೆಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ನಡೆದಿದೆ.  ಶಿವನಾಯ್ಕ್ (50) ಮೃತ ವ್ಯಕ್ತಿ.

ಶಿವನಾಯ್ಕ್ ಅವರು ಮಣಿಪಾಲದ ಗ್ರೀನ್ ಪಾರ್ಕ್ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದರು. ಲೋಕು ಪೂಜಾರಿಯವರ ಮನೆಯ ಆವರಣದಲ್ಲಿರುವ ಬಾವಿಗೆ ಅವರ ಕೊಡಪಾನ ಬಿದ್ದದ್ದನ್ನು ತೆಗೆಯಲು ಶಿವನಾಯ್ಕ್ ಅವರು ಬಾವಿಗೆ ಇಳಿದಾಗ ಈ ದುರ್ಘಟನೆ ಸಂಭವಿಸಿದೆ.

ತಕ್ಷಣ ಉಡುಪಿ ಅಗ್ನಿಶಾಮಕ ದಳದವರು ಬಂದು ಶವವನ್ನು ಬಾವಿಯಿಂದ ಮೇಲೆತ್ತಿದ್ದಾರೆ. ಮೃತರು ಪತ್ನಿ ಓರ್ವ ಪುತ್ರ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!