Saturday, June 6, 2026
Homeತಾಜಾ ಸುದ್ದಿಎರಡು ದಿನಗಳಲ್ಲಿ ರಾಜ್ಯದಲ್ಲಿ ಮಾರಾಟವಾದ ಮದ್ಯ ಎಷ್ಟು ಗೊತ್ತಾ?

ಎರಡು ದಿನಗಳಲ್ಲಿ ರಾಜ್ಯದಲ್ಲಿ ಮಾರಾಟವಾದ ಮದ್ಯ ಎಷ್ಟು ಗೊತ್ತಾ?

- Advertisement -
- Advertisement -

ಬೆಂಗಳೂರು: ಇಂದು ರಾತ್ರಿ 8 ಗಂಟೆಯಿಂದ ರಾಜ್ಯದ 7 ಜಿಲ್ಲೆಗಳಲ್ಲಿ 1 ವಾರಗಳ ಕಾಲ ಲಾಕ್ ಡಾನ್ ಘೋಷಣೆಯಾಗಿದೆ. ಲಾಕ್ ಡೌನ್ ಅಂತಾ ಹೇಳ್ತಿದ್ದಂತೆ ರಾಜ್ಯದಲ್ಲಿ ಹೆಚ್ಚು ತಲೆ ಕೆಡಿಸಿಕೊಂಡದ್ದು ಮದ್ಯಪ್ರಿಯರು. ಎಲ್ಲಾದರೂ ಕಳೆದ ಬಾರಿಯ ಲಾಕ್ ಡೌನ್ ನಂತೆ ಈ ಬಾರಿಯೂ ಮದ್ಯಕ್ಕೆನಾದ್ರೂ ತೊಂದರೆ ಆದ್ರೆ ಅಂತಾ ಅನೇಕರು ಮೊನ್ನೆಯಿಂದಲೇ ಮದ್ಯ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಊಟ ಬಿಟ್ಟಾದರೂ ಇರ್ತೀವಿ ಆದ್ರೆ ಮದ್ಯ ಬಿಡಲ್ಲ ಅನ್ನೋ ರೇಂಜಿಗೆ ಎಲ್ಲರೂ ಮದ್ಯದಂಗಡಿ ಮುಂದೆ ಕ್ಯೂ ನಿಂತಿದ್ರು. ಕೆಲವರಂತೂ ಫ್ಯಾಮಿಲಿ ಸಮೇತ ಮದ್ಯ ಖರೀದಿಗೆ ಬಂದಿದ್ರು.

ಇನ್ನು ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ನಿನ್ನೆ ಮದ್ಯದ ಸ್ಟಾಕ್ಸ್‌ ಖಾಲಿಯಾಗಿತ್ತು. ಅಷ್ಟರ ಮಟ್ಟಿಗಿತ್ತು ಮದ್ಯ ಪ್ರಿಯರ ಶಾಪಿಂಗ್. ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯದ ಅನೇಕ ಕಡೆಗಳಲ್ಲಿ ಲಾಕ್ ಡೌನ್ ಭಯಕ್ಕೆ ಜನ ಭರ್ಜರಿಯಾಗಿ ಮದ್ಯ ಶಾಪಿಂಗ್ ಮಾಡಿದ್ರು. ಹಾಗಾಗಿ ಕಳೆದ ಎರಡು ದಿನಗಳಲ್ಲಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಬಂದಿದೆ. ಅಬಕಾರಿ ಇಲಾಖೆಗೆ ಎರಡು ದಿನಗಳಲ್ಲಿ ಉತ್ತಮ ಲಾಭ ಬಂದಿದೆ. ಎರಡು ದಿನಗಳಲ್ಲಿ 419 ಕೋಟಿ ರೂಪಾಯಿ ಮದ್ಯ ರಾಜ್ಯದಲ್ಲಿ ಮಾರಾಟವಾಗಿದೆ.

- Advertisement -

Latest News

error: Content is protected !!