Friday, June 5, 2026
Homeಕರಾವಳಿಉಡುಪಿಉಡುಪಿ: ನಂದಿಕೂರು ಸ್ಥಾವರದಿಂದ ಕೇರಳಕ್ಕೆ ವಿದ್ಯುತ್; ಹೈ‌ಟೆನ್ಷನ್ ತಂತಿ ಅಳವಡಿಕೆಗೆ ವಿರೋಧ, ಕಾಮಗಾರಿ ಸ್ಥಗಿತ

ಉಡುಪಿ: ನಂದಿಕೂರು ಸ್ಥಾವರದಿಂದ ಕೇರಳಕ್ಕೆ ವಿದ್ಯುತ್; ಹೈ‌ಟೆನ್ಷನ್ ತಂತಿ ಅಳವಡಿಕೆಗೆ ವಿರೋಧ, ಕಾಮಗಾರಿ ಸ್ಥಗಿತ

- Advertisement -
- Advertisement -

ಉಡುಪಿ: ನಂದಿಕೂರು ಉಷ್ಣ ವಿದ್ಯುತ್ ಸ್ಥಾವರದಿಂದ ಕೇರಳಕ್ಕೆ ವಿದ್ಯುತ್ ಸರಬರಾಜು ಮಾಡುವ ಕಾಮಗಾರಿಗೆ ವಿರೋಧ ವ್ಯಕ್ತವಾಗಿದೆ.

ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಅಳವಡಿಸುವ ಕಾಮಗಾರಿ ವೇಳೆ ಅಧಿಕಾರಿಗಳನ್ನು ಗ್ರಾಮಸ್ಥರು ಹಾಗೂ ರಾಜಕೀಯ ಮುಖಂಡರು ತಡೆ ಒಡ್ಡಿದ್ದಾರೆ.

ಸ್ಥಳೀಯ ಕಾಂಗ್ರೆಸ್ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಳಿಕ ಅಧಿಕಾರಿಗಳು ಕಾಮಗಾರಿಯನ್ನು ಸ್ಥಗಿತಗೊಳಿಸಿ ವಾಪಸಾಗಿದ್ದಾರೆ.ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶದ ನಡುವೆ ಹೈ ಟೆನ್ಷನ್ ವಯರ್ ಹಾದು ಹೋಗುವ ಕಾರಣ ನೂರಾರು ಕೃಷಿಕರು ಸಂತ್ರಸ್ಥರಾಗುವ ಸಾಧ್ಯತೆ ಇದೆ.

ಈ ಹಿಂದೆಯೂ ಕಾಮಗಾರಿ ನಡೆಸುತ್ತಿದ್ದ ವೇಳೆ ಗ್ರಾಮಸ್ಥರು ಹೋರಾಟ ನಡೆಸಿದ್ದ ಕಾರಣ ಯೋಜನೆ ಸ್ಥಗಿತಗೊಂಡಿತ್ತು.

- Advertisement -

Latest News

error: Content is protected !!