Thursday, June 4, 2026
Homeಆರಾಧನಾಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದದಿಂದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಕಾರ್ಯಕ್ರಮ

ಶ್ರೀ ಭಾಟ್ಲಾದೇವಿ ಅಯ್ಯಪ್ಪ ಭಕ್ತವೃಂದದಿಂದ 35ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ ಕಾರ್ಯಕ್ರಮ

- Advertisement -
- Advertisement -

ದಹಿಸರ್(ಮುಂಬಯಿ): ಶ್ರೀ ಭಾಟ್ಲದೇವಿ ಅಯ್ಯಪ್ಪ ಭಕ್ತವೃಂದ(ರಿ) ದಿಂದ ಶ್ರೀ ಬಾಟ್ಲಾದೇವಿ ಮಂದಿರ ಭರೂಚ ರೋಡ್ ದಹಿಸರ್ ಪೂರ್ವ ದೇವಸ್ಥಾನ ವಠಾರದ ಸಚ್ಚಿದಾನಂದ ಶೆಟ್ಟಿಯವರ ಸ್ಮರಣಾರ್ಥ ವೇದಿಕೆಯಲ್ಲಿ 35ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಯ ಕಾರ್ಯಕ್ರಮಗಳು ಡಿ.07 ಶನಿವಾರದಂದು ನಡೆಯಲಿದೆ.

ಅಂದು ಜರಗುವ ಅಯ್ಯಪ್ಪ ಪೂಜೆಯನ್ನು ದಹಿಸರ್ ನ ವಿನಾಯಕ ಗುರುಸ್ವಾಮಿಯವರ ದಿವ್ಯ ಹಸ್ತದಿಂದ ನೇರವೇರಿಸಲಾಗುತ್ತದೆ.

ಕಾರ್ಯಕ್ರಮದ ವಿವರ: ಬೆಳಿಗ್ಗೆ ಗಂಟೆ 6:00 ರಿಂದ ಗಣ ಹೋಮ, 7ರಿಂದ ಪ್ರತಿಷ್ಠಾಪನೆ, ಬೆಳಿಗ್ಗೆ 10 ರಿಂದ ಹನುಮಾನ್ ಭಜನಾ ಮಂಡಳಿ ಅಶೋಕವನ ದಹಿಸರ್ ಪೂರ್ವ ಇವರಿಂದ ಭಜನೆ ಬಳಿಕ ಅಯ್ಯಪ್ಪ ಸ್ವಾಮಿ ವೃತಧಾರಿಯವರಿಂದ ಭಜನೆ ನಡೆಯುತ್ತದೆ.

ಮಧ್ಯಾಹ್ನ 12 ಗಂಟೆಯಿಂದ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಯ್ಯಪ್ಪ ಮಹಾಪೂಜೆ ಜರಗಿದ ಬಳಿಕ ಮಹಾಪ್ರಸಾದ ಅನ್ನಸಂತರ್ಪಣೆ ನೆರವೇರುವುದು.

ಸಂಜೆ 6:00 ಗಂಟೆಯಿಂದ ಸಾಂಸ್ಕೃತಿಯ ಕಾರ್ಯಕ್ರಮದ ಅಂಗವಾಗಿ ತ್ರಿಶಾ ಸನತ್ ಶೆಟ್ಟಿ ಅವರಿಂದ ಗಣೇಶ ವಂದನ ಕಟೀಲು ದುರ್ಗೆ ದುಂಬಿಯಂತೆ ಓಡಿ ಬಂದಳು ನೃತ್ಯ, ಅಯ್ಯಪ್ಪ ಸ್ತುತಿ ಹರಿವರಸನಂ ಬಳಿಕ ವಿಜಯ ಸಾಲಲ್ಯಾನ್ ತಂಡದವರಿಂದ ಭಜನೆ ಜರಗಲಿದೆ. ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಹೋಟೆಲ್ ಉದ್ಯಮಿ ಸದಾನಂದ ಕೆ ಶೆಟ್ಟಿ ಅವರನ್ನು ಭಕ್ತಾದಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು. 

- Advertisement -

Latest News

error: Content is protected !!