Thursday, January 16, 2025
Homeಕರಾವಳಿಬೆಳ್ತಂಗಡಿ : ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ : ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದ ವ್ಯಕ್ತಿ ನಾಪತ್ತೆ

spot_img
- Advertisement -
- Advertisement -

ಬೆಳ್ತಂಗಡಿ : ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ವಾಪಸ್ಸು ಮನೆಗೆ ಬಾರದೆ ನಾಪತ್ತೆಯಾಗಿರುವ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಮುಂಡತ್ತೋಡಿ ನಿವಾಸಿ ಹರೀಶ್ ರವರ ಪತ್ನಿ ನಯನರವರ ದೂರಿನಂತೆ  ಹರೀಶ್ ( 35) ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಕುಡಿತದ ಚಟವುಳ್ಳವರಾಗಿರುತ್ತಾರೆ. ನ.20 ರಂದು ಬೆಳಿಗ್ಗೆ 6 ಗಂಟೆಗೆ ಸುಬ್ರಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವರು ಈವರೆಗೆ ಮನೆಗೆ ಬಾರದೇ ಇದ್ದು ಅವರ ದೂರವಾಣಿಗೆ ಕರೆ ಮಾಡಲಾಗಿ ಸ್ವಿಚ್ ಆಫ್ ಇದ್ದು ಅವರ ತಂದೆ-ತಾಯಿ ಮನೆಯಾದ ಈಶ್ವರಮಂಗಳಕ್ಕೆ ಪೋನ್ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಸಹ ಹೋಗದೇ ಕಾಣೆಯಾಗಿರುತ್ತಾರೆ,  ಹಾಗೂ ಈ ಹಿಂದೆಯೂ ಸಹ ಮನೆಯಿಂದ ಹೋದವರು 1 ವಾರದ ನಂತರ ಮನೆಗೆ ಬರುತ್ತಿದ್ದರು ಆದ್ದರಿಂದ ಮರಳಿ ಬರುಬಹುದೆಂಬ ನಿರೀಕ್ಷೆಯಿಂದ ಇದ್ದು ಮರಳಿ ಬಾರದೇ ಇರುವುದರಿಂದ ಡಿ.4 ರಂದು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ,

ಈ ಬಗ್ಗೆ, ಎಲ್ಲಿಯಾದರೂ ಕಂಡು ಬಂದರೆ ಕೂಡಲೇ ಬೆಳ್ತಂಗಡಿ ಪೊಲೀಸ್ ಠಾಣೆ (08256- 232093) ಅಥವಾ ದ.ಕ ಜಿಲ್ಲಾ, ಕಂಟ್ರೋಲ್ ರೂಂ(0824-2220500) ಗೆ ಸಂಪರ್ಕಿಸುವಂತೆ ತಿಳಿಸಲಾಗಿದೆ.

- Advertisement -
spot_img

Latest News

error: Content is protected !!