Friday, June 5, 2026
Homeಕರಾವಳಿಮಂಗಳೂರುಕಡಬದಲ್ಲಿ ನಾಪತ್ತೆಯಾಗಿದ್ದ ಯುವಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಕಡಬದಲ್ಲಿ ನಾಪತ್ತೆಯಾಗಿದ್ದ ಯುವಕ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

- Advertisement -
- Advertisement -

ಕಡಬದಲ್ಲಿ ನಾಪತ್ತೆಯಾಗಿದ್ದ ಯುವಕ ಸಂದೀಪ್ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಯಾಗಿದೆ. ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29) ಕೆಲಸಕ್ಕೆಂದು ತೆರಳಿದವರು ನಾಪತ್ತೆಯಾಗಿದ್ದರು.

ಇಂದು ನೆಟ್ಟಣ ರೈಲು ನಿಲ್ದಾಣದ ಸುಮಾರು ಒಂದುವರೆ ಕಿ.ಮೀ ದೂರದ ನಾರಡ್ಕ ಎಂಬಲ್ಲಿ ದಟ್ಟ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಸಂದೇಹ ಮೃತದೇಹ ಪತ್ತೆಯಾಗಿದೆ.   ಕೊಲೆ ಪ್ರಕರಣದಲ್ಲಿ ಕೇಳಿ ಬಂದಿರುವ  ಪ್ರತೀಕ್  ಎಂಬಾತನನ್ನು ಪೊಲೀಸರು ಕರೆದೊಯ್ದಿದ್ದು  ಈ ವೇಳೆ ಸಾರ್ವಜನಿಕರು ತಡೆಯೊಡ್ಡಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಸ್ಥಳದಲ್ಲಿ ಡಿವೈಎಸ್ಪಿ, ವೃತ್ತ ನಿರೀಕ್ಷರು ಮತ್ತು ಕಡಬ ಎಸ್.ಐ ನೇತೃತ್ವದ ಪೊಲೀಸರು,ಸಾರ್ವಜನಿಕರು ಸೇರಿದ್ದರು

ಮೃತ ದೇಹ ಇರುವ ಜಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದು ಕೆಲ ಹೊತ್ತು ಆತಂಕದ ವಾತಾವರಣಕ್ಕೆ ಕಾರಣವಾಗಿತ್ತು. ಪೊಲೀಸರ ವಾಹನಕ್ಕೂ ತಡೆಯೊಡ್ಡಿ ಆಕ್ರೋಶ ಹೊರ ಹಾಕಿದರು.  ಸಾರ್ವಜನಿಕರು  ಓರ್ವನೇ ಕೊಲೆ ಮಾಡಿದನೇ ಅಥವಾ ಇತರರು ಯಾರಾದರೂ ಇದ್ದಾರೆಯೇ ಎಂಬುದರ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು   ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

- Advertisement -

Latest News

error: Content is protected !!