Wednesday, June 3, 2026
Homeತಾಜಾ ಸುದ್ದಿಜಗನ್‌ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್‌ ವಿಸರ್ಜಿಸಿದ ಚಂದ್ರಬಾಬು; ರಾಜ್ಯದಲ್ಲಿ ಹೊಸ ವಕ್ಫ್ ಮಂಡಳಿಯನ್ನು ರಚಿಸುವುದಾಗಿ...

ಜಗನ್‌ ಸರ್ಕಾರ ರಚಿಸಿದ್ದ ವಕ್ಫ್ ಬೋರ್ಡ್‌ ವಿಸರ್ಜಿಸಿದ ಚಂದ್ರಬಾಬು; ರಾಜ್ಯದಲ್ಲಿ ಹೊಸ ವಕ್ಫ್ ಮಂಡಳಿಯನ್ನು ರಚಿಸುವುದಾಗಿ ಆಂಧ್ರ ಸರ್ಕಾರದಿಂದ ಘೋಷಣೆ

- Advertisement -
- Advertisement -

ಅಮರಾವತಿ: ವೈಎಸ್‌ಆರ್‌ ಕಾಂಗ್ರೆಸ್‌ ಆಡಳಿತದಲ್ಲಿ ರಚಿಸಲಾಗಿದ್ದ ವಕ್ಫ್ ಮಂಡಳಿಯನ್ನು ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ವಿಸರ್ಜಿಸಿದ್ದು, ರಾಜ್ಯದಲ್ಲಿ ಹೊಸ ವಕ್ಫ್ ಮಂಡಳಿಯನ್ನು ರಚಿಸುವುದಾಗಿಯೂ ತಿಳಿಸಿದೆ.

ಈ ಕುರಿತಂತೆ ನಾಯ್ಡು ಸರ್ಕಾರ ಭಾನುವಾರದಂದ ಆದೇಶ ಹೊರಡಿಸಿದ್ದು, ‘ 2023ರ ಮಾರ್ಚ್‌ನಿಂದ ವೈಎಸ್‌ಆರ್‌ ಸರ್ಕಾರದಲ್ಲಿ ರಚನೆಯಾಗಿದ್ದ ವಕ್ಫ್ ಮಂಡಳಿ ಕಾರ್ಯನಿರ್ವಹಿಸುತ್ತಿಲ್ಲ. ವಕ್ಫ್ ಕಾರ್ಯಾಚರಣೆಯಲ್ಲಿ ಮುಖ್ಯ ತೊಡಕು ಉಂಟಾಗಲು ಕಾರಣ ಮಂಡಳಿಯಲ್ಲಿ ಸುನ್ನಿ ಮತ್ತು ಶಿಯಾ ಸಮುದಾಯಗಳ ವಿದ್ವಾಂಸರು ಹಾಗೂ ಮಾಜಿ ಸಂಸದರಿರಲಿಲ್ಲ. ಇದಕ್ಕಾಗಿ ಹೊಸ ವಕ್ಫ್ ಮಂಡಳಿಯ ಅಗತ್ಯವಿದೆ,’ ಎಂದು ತಿಳಿಸಿದರು.

ದೇಶದಾದ್ಯಂತ ವಕ್ಫ್ ವಿಚಾರವು ಭಾರೀ ಸದ್ದು ಮಾಡುತ್ತಿರುವಾಗಲೇ ಆಂಧ್ರ ಸರ್ಕಾರ ಈ ಕುರಿತಂತೆ ಹೊಸ ನಿರ್ಧಾರವನ್ನು ಪ್ರಕಟಿಸಿದೆ.

- Advertisement -

Latest News

error: Content is protected !!