ವಿಜಯಪುರ: ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡುತ್ತೇನೆ ಎಂದು ಸದಾನಂದಗೌಗೆ ಬಸನಗೌಡ ಯತ್ನಾಳ್ ವಾರ್ನಿಂಗ್ ಕೊಟ್ಟಿದ್ದಾರೆ.
ಬಿಜೆಪಿ ಬಣ ರಾಜಕೀಯದ ಬಗ್ಗೆ ನಿನ್ನೆ ಮಾಜಿ ಸಿಎಂ ಸದಾನಂದ ಗೌಡ ವಾಗ್ದಾಳಿ ನಡೆಸಿದ್ದರು. ಇದಕ್ಕೆ ವಿಜಯಪುರದಲ್ಲಿ ಪ್ರತಿಕ್ರಿಯಿಸಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಡಿ ವಿ ಸದಾನಂದಗೌಡ ಅವರು ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಅವರ ಬಂಡವಾಳ ನಾನು ಬಯಲು ಮಾಡುತ್ತೇನೆ ಎಂದು ಸದಾನಂದಗೌಡ ಅವರಿಗೆ ಯತ್ನಾಳ್ ವಾರ್ನಿಂಗ್ ಕೊಟ್ಟಿದ್ದಾರೆ.
ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದಗೌಡರು ಮಾತನಾಡಿರೋದನ್ನೆಲ್ಲ ನಾನು ಬಯಲು ಮಾಡುತ್ತೇನೆ. ನನಗಿಂತ ಕೆಟ್ಟದಾಗಿ ಡಿ ವಿ ಸದಾನಂದಗೌಡ ಅವರು ಬಿಎಸ್ ವೈ ವಿರುದ್ಧ ಮಾತನಾಡಿದ್ದಾರೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ ಇದಕ್ಕೆ ಸದಾನಂದಗೌಡ ಅವರು ಯಾಕೆ ಗಾಬರಿಯಾಗಬೇಕು. ಸದಾನಂದಗೌಡರೇ ನೀವು ಗಾಬರಿಯಾಗಬೇಡಿ ಎಂದಿದ್ದಾರೆ. ನಾನು ಯಾರು ಜೊತೆನೂ ಎಡ್ಜಸ್ಟಮೆಂಟ್ ಮಾಡಿಕೊಂಡಿಲ್ಲ. ನನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ ಇದು ಹೊಸ ವಚನ ಎಂದು ಡಿವಿಎಸ್ ವಿರುದ್ಧ ಯತ್ನಾಳ್ ವಾಗ್ದಾಳಿ ಮಾಡಿದ್ದಾರೆ.
ಇನ್ನು ಮಾಜಿ ಸಿಎಂ ಸದಾನಂದಗೌಡಗೆ ಪಂಥಾಹ್ವಾನ ನೀಡಿದ್ಗದಾರೆ. ಯಡಿಯೂರಪ್ಪ ವಿರುದ್ಧ ಇದೇ ಸದಾನಂದಗೌಡ ಕೆಟ್ಟದಾಗಿ ಮಾತನಾಡಿದ್ದಾರೆ. ಇಲ್ಲ ಎನ್ನೋದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.


